ಬೆಂಗಳೂರು: ಅವರಿಬ್ಬರು ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿ ಮಾಡಿ ಮೂರು ವರ್ಷದ ಹಿಂದೆ ಮದುವೆಯಾಗಿದ್ರು. ಆ ಜೋಡಿಯ ಹೆಸ್ರು ಯೋಗೇಶ್ ಮತ್ತು ಸೌಮ್ಯ. ಬ್ಯಾಡರಹಳ್ಳಿ ಬಳಿಯ ಮುನೇಶ್ವರ ಲೇಔಟ್ ವಾಸವಾಗಿದ್ದ ಈ ಜೋಡಿ ಪ್ರೀತಿ ಕಡಿಮೆಯಾಗಿ ಹಣಕಾಸಿನ ವಿಚಾರಕ್ಕೆ ಕಿರಿಕ್ ಶುರುವಾಗಿತ್ತು. ಅಪ್ಪ-ಅಮ್ಮ ವಿರೋಧದ ನಡುವೆ ಮದುವೆ ಆಗಿದ್ರು ಸಹ ಅಪ್ಪನ ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ನಿತ್ಯ ಜಗಳ ಮಾಡ್ತಿದ್ದನಂತೆ. ಎರಡು ಬಾರಿ ಸೌಮ್ಯ ತನ್ನ ತಂದೆ ಮನೆಗೆ ಹೋಗಿ ಅಲ್ಲಿಂದ ಹಣವನ್ನು ತಂದು ಕೊಟ್ಟಿದ್ದಳಂತೆ..
ಇಷ್ಟಾದ್ರೂ ಹಣದ ದಾಹ ತೀರದ ಯೋಗೇಶ್ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಸೌಮ್ಯ ಇದಕ್ಕೆ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಆಗಾಗ ಗಲಾಟೆ ಮಾಡ್ಕೋಂಡು ಠಾಣೆ ಮೆಟ್ಟಿಲೇರಿದ್ರು. ನಿನ್ನೆ ತಡರಾತ್ರಿ ಮತ್ತೆ ಜಗಳ ತೆಗೆದ ಯೋಗೇಶ್ ಪತ್ನಿಯ ಕುತ್ತಿಗೆಯನ್ನು ವೇಲ್ ನಿಂದ ಜೀರಿ ಉಸಿರು ನಿಲ್ಲಿಸಿದ್ದಾನೆ ಎಂದು ಹೇಳಲಾಗ್ತಿದೆ.
ಆದ್ರೆ ಪೊಲೀಸರು ವಿಚಾರಣೆ ವೇಳೆ 'ಸಾರ್ ನಾನ್ ಕೊಲೆ ಮಾಡಿಲ್ಲ ಅವಳೆ ಕತ್ತಿಗೆ ವೇಲ್ ಸುತ್ತಿಕೊಂಡು ಸತ್ತಿದ್ದಾಳೆ' ಅಂತ ಹೇಳ್ತಿದ್ದಾನೆ. ಸದ್ಯ ಪೊಲೀಸ್ರು ಪೊಸ್ಟ್ ಮಾರ್ಟಮ್ ರಿಪೋರ್ಟ್ ಗೆ ವೇಟ್ ಮಾಡ್ತಿದ್ದು, ಕೊಲೆ ಕೇಸ್ ಅಡಿಯಲ್ಲೇ ತನಿಖೆ ಮುಂದುವರಿಸಿದ್ದಾರೆ.
-ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
27/03/2022 07:49 pm