ಬೆಂಗಳೂರು: ಕರಕುಶಲ ಕ್ಷೇತ್ರದಲ್ಲಿ ಕಳೆದ 35 ವರ್ಷಗಳ ಶ್ರಮಕ್ಕೆ ಧಕ್ಕಿದ್ದ ರಾಷ್ಟ್ರಪತಿ ಪದಕವನ್ನೂ ಕಳ್ಳರು ದೋಚಿರುವ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ.
ರಾಷ್ಟ್ರಪ್ರಶಸ್ತಿ ವಿಜೇತೆ ಹೇಮಾ ಶೇಖರ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಕರಕುಶಲ ಕಲೆಯಲ್ಲಿ ಕಳೆದ 35 ವರ್ಷಗಳಿಂದ ಹೇಮಾ ಗುರುತಿಸಿಕೊಂಡಿದ್ರು. ಇವರ ಸಾಧನೆ ಗಮನಿಸಿ 2002ರಲ್ಲಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಹಾಗೂ 2014ರಲ್ಲಿ ಪ್ರಣವ್ ಮುಖರ್ಜಿ ಅವರು
ಶಿಲ್ಪಗುರಿ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದು ಕರ ಕುಶಲಕರ್ಮಿಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಘಟನೆ ಹಿನ್ನೆಲೆ ನೋಡುವುದಾದ್ರೆ ರಾಷ್ಟ್ರಪದಕ ವಿಜೇತೆ ಹೇಮಶೇಖರ್ ಹಾಗೂ ಪತಿ ಚಂದ್ರಶೇಖರ್ ದಂಪತಿ ಕೋಣನಕುಂಟೆಯ ಸುಪ್ರಜಾನಗರದಲ್ಲಿ ವಾಸವಾಗಿದ್ರು. ಕಳೆದ 5ನೇ ತಾರೀಖು ಮೈಸೂರಿಗೆ ತೆರಳಿದ್ದ ವೇಳೆ, 22 ಗ್ರಾಂ ಚಿನ್ನದ ಪದಕ ಸುಮಾರು 200 ಗ್ರಾಂ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ಹಾಗೂ 85 ಸಾವಿರ ನಗದು ದೋಚಿದ ಕಳ್ಳರು ಪರಾರಿಯಾಗಿದ್ದಾರೆ.
ಇನ್ನು ಹೇಮಾವತಿ 1995ರ ರಾಜ್ಯ ಪ್ರಶಸ್ತಿ, 1994ರಲ್ಲಿ ರಾಜ್ಯ ಮೆರಿಟ್ ಸರ್ಟಿಫಿಕೇಟ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನೆಲ್ಲ ಗಮನಿಸಿರುವ ಖದೀಮರು ಹೇಮಾವತಿ ಪಕ್ಕದ ಮನೆಯ ಟರೇಸ್ ಮೂಲಕ ಹತ್ತಿ ಮುಖಕ್ಕೆ ಟವೆಲ್ ಸುತ್ತಿಕೊಂಡು ಮನೆಯ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
18/03/2022 07:57 pm