ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಫಾರ್ಚ್ಯೂನರ್ ಕಾರ್‌ನಲ್ಲಿ ಡ್ರಗ್ ಸೇವಿಸುವಾಗ ಉದ್ಯಮಿ ಮಗ ಲಾಕ್

ಬೆಂಗಳೂರು:ತಂದೆ ನಯಾಝ್ ಅಹ್ಮದ್ ಬಟ್ಟೆ ವ್ಯಾಪಾರ ಮಾಡಿದ್ರೆ ಮಗ ಫೈಝನ್ ಅಹ್ಮದ್ ಡ್ರಗ್ ಮಾರಾಟ ಮಾಡುವಾಗ ಕೆಂಗೇರಿ ಪೊಲೀಸ್ರಿಗೆ ಲಾಕ್ ಆಗಿದ್ದಾನೆ.

ಫಾರ್ಚ್ಯೂನರ್ ಕಾರಿನಲ್ಲಿ ಲಕ್ಷ್ಮಿದೇವಿ‌ ಟೆಂಪಲ್ ಬಳಿ ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿಯನ್ನ ಕೆಂಗೇರಿ ಪೊಲೀಸ್ರು ಬಂಧಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಈ ಡ್ರಗ್ ಮಾರಾಟ ಮಾಡ್ತಿದ್ದ ಫೈಝನ್, ಬಾಪೂಜಿನಗರ ನಿವಾಸಿಯಾಗಿದ್ದು, ಡ್ರಗ್ ಪೆಡ್ಲಿಂಗ್ ಗೆ ಅಪ್ಪನ ಫಾರ್ಚ್ಯೂನರ್ ಕಾರನ್ನೆ ಬಳಸುತ್ತಿದ್ದ. ಪೊಲೀಸರು ಈತನಿಂದ 5 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್ ಅನ್ನ ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆ ದಾಳಿ‌ ನಡೆಸಿ ಸಿಂಥಟಿಕ್ ಡ್ರಗ್ಸ್ ನ ಪೊಲೀಸ್ರು ಸೀಜ್ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

12/03/2022 12:48 pm

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ