ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೀಸೆ ಚಿಗುರದ ಹುಡುಗರ ಕ್ರೈಂ ಗೆ ಬ್ರೇಕ್ ಹಾಕಿದ ಖಾಕಿ

ಅವರಿಗೆ ಇನ್ನೂ ಕೆಲಸ ಹುಡುಕೋ ವಯಸ್ಸು. ಆದ್ರೆ ಕೆಲಸ ಹುಡುಕೋದು ಬಿಟ್ಟು ಇನ್ನೊಬ್ಬರ ಮನೆ ಮುರಿಯೋ ಕೆಲಸದ ದಾಸರಾಗಿದ್ರು. ನಗರದ ಹಲವೆಡೆ ದುಬಾರಿ ಬೈಕ್‌ಗಳನ್ನೆ ಕಳ್ಳತನ ಮಾಡಿ ಅದೇ ಬೈಕ್‌ಲ್ಲಿ ಬಂದು ಮನೆ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾ ಇದ್ರು. ಮನೆ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ವೇಳೆ ನೋಡಿ ಬೀಟ್ ಪೊಲೀಸರು ಅಲ್ಲಿಗೆ ಬರ್ತಿದ್ದಂತೆ ಈ ಆರು ಜನ ಅಲ್ಲಿಂದ ಕಾಲ್ಕಿತ್ತಿದ್ರೂ. ಕೋಣನಕುಂಟೆ ಪೊಲೀಸರಿಗೆ ಅದ್ಯಾಕೋ ಅನುಮಾನ ಬಂದು ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆಮೇಲೆ ಐನಾತಿ ಕಳ್ಳರ ಅಸಲಿಯತ್ತು ಬಯಲಾಗಿದೆ.

ಸೆರೆಸಿಕ್ಕ ಸುಮಂತ್ ಹಾಗೂ ಸಾಗರ್ ನನ್ನ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಇನ್ನುಳಿದ ನಾಲ್ಕು ಜನರ ಹೆಸರನ್ನ ಬಾಯ್ಬಿಟ್ಟಿದ್ದಾರೆ. ಅವರಲ್ಲಿ ಮೂವರೂ ಆರೋಪಿಗಳನ್ನ ಪತ್ತೆ ಹಚ್ಚಿ ಉಲ್ಲಾಸ್ @ವಾಲಿ, ರಘು ನಾಯಕ್ @ರಘು, ನಂದನ್ @ನಂದು ಎಂಬಾತರನ್ನ ವಿಚಾರಣೆ ನಡೆಸಿದಾಗ ಈ ಹಿಂದೆ ನಡೆದಿದ್ದ ಹಲವಾರು ಪ್ರಕರಣಗಳು ಪತ್ತೆಯಾಗಿವೆ.

ಕೋಣನಕುಂಟೆ ಠಾಣೆ ವ್ಯಾಪ್ತಿಯ ಮೂರು ಮನೆಗಳಲ್ಲಿ ಮತ್ತು ಜಿಗಣಿಯಲ್ಲಿ 1 ಮನೆ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಇವರು ಬೈಕ್ ಕಳ್ಳತನ‌ ಮಾಡ್ತಾ ಇರೋದು ಕೂಡ ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿಯಲ್ಲಿ 15 ಬೈಕ್, ಹೆಬ್ಬಗೋಡಿಯಲ್ಲಿ 1KTM ಬೈಕ್ ಕದ್ದಿರೋದಾಗಿ ಒಪ್ಪಿಕೊಂಡಿದ್ದಾರೆ. ಯಾವ ಬೀಗವನ್ನ ಸುಲಭವಾಗಿ ಮುರಿಯಲು ಸಾಧ್ಯವೋ ಅಂತಹ ಮನೆಗಳನ್ನ ಮಾತ್ರ ಟಾರ್ಗೆಟ್ ಮಾಡ್ತಿದ್ದ ಈ ಗ್ಯಾಂಗ್ ಕಳ್ಳತನ‌ ಮಾಡ್ತಾ ಇತ್ತು.

ಸದ್ಯ ಆರೋಪಿಗಳನ್ನ ಬಂಧಿಸಿರುವ ಕೋಣನಕುಂಟೆ ಪೊಲೀಸರು ಬಂಧಿತರಿಂದ 10ಲಕ್ಷ ಮೌಲ್ಯದ ಚಿನ್ನಾಭರಣಗಳು, 3ಲಕ್ಷ ಮೌಲ್ಯದ ಬೈಕ್‌ಗಳು ಜಪ್ತಿ ಮಾಡಿದ್ದಾರೆ‌ ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.

Edited By :
Kshetra Samachara

Kshetra Samachara

06/03/2022 07:04 pm

Cinque Terre

2.99 K

Cinque Terre

0

ಸಂಬಂಧಿತ ಸುದ್ದಿ