ಬೆಂಗಳೂರು: ಇವ್ನು ಈ ಹಿಂದೆ ಸೌದಿಯಲ್ಲಿ ಪೊಲೀಸ್ ಕೆಲಸದಲ್ಲಿದ್ದ. ವಿಆರ್ ಎಸ್ ತಗೊಂಡು ಕೇರಳಕ್ಕೆ ಬಂದು ಬ್ಯುಸಿನೆಸ್ ಆರಂಭಿಸಿದ್ದ. ಮಗ ಐಟಿ ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳ ಪಡಿತಿದ್ರೂ ಅಪ್ಪನಿಗೆ ಓಡಾಡೋಕೆ ಒಂದು ಬೈಕ್ ಕೂಡ ಕೊಡಿಸಿರ್ಲಿಲ್ಲ.
ಮಗ ಖರ್ಚಿಗೆ ಹಣ ಕೊಡ್ತಿಲ್ಲ, ಓಡಾಡೋಕೆ ಬೈಕು- ಕಾರು ಇಲ್ಲ ಅಂತ ಈತ ಆಯ್ಕೆ ಮಾಡಿದ್ದು ಕಳ್ಳತನ! ಮನೆ ಮುಂದೆ ನಿಲ್ಲಿಸಿದ ಬೈಕ್, ಕಾರ್ ಗೆ ಕೈ ಹಾಕ್ತಿರ್ಲಿಲ್ಲ. ಕೈ ಹಾಕ್ತಿದ್ದು ಶೋರೂಮ್‌ಗೆ ಮಾತ್ರ! ಹೀಗೆ ಶೋರೂಂ ನ ಟಾರ್ಗೆಟ್ ಮಾಡ್ಕೊಂಡು ಕಳ್ಳತನ ಮಾಡ್ತಿದ್ದ 60ರ ಹರೆಯದ ನಜೀರ್ ಅಹಮ್ಮದ್ ಈಗ ಬ್ಯಾಟರಾಯನಪುರ ಪೊಲೀಸ್ರ ʼಅತಿಥಿʼ.
ಕಳೆದ ತಿಂಗಳು ಮೈಸೂರು ರಸ್ತೆಯ ಕಾರು ಶೋರೂಂ ಪಾರ್ಕಿಂಗ್ ನಲ್ಲಿ ಕಾರು ಕದ್ದಿದ್ದ ನಜೀರ್, ಬೈಕ್ ಶೋರೂಂನಲ್ಲೂ ಬೈಕ್ ಕದ್ದಿದ್ದ. ಕಸ್ಟಮರ್ ಸೋಗಿನಲ್ಲಿ ಬಂದು ವೆಹಿಕಲ್ ಥೆಪ್ಟ್ ಮಾಡ್ತಿದ್ದ ಈತ ಹಿಂದೆ ಕೂಡ ಸಾಕಷ್ಟು ಹೈ ಆಂಡ್ ಕಾರು ಕದ್ದು ಜೈಲು ಸೇರಿದ್ದ.
ಆದ್ರೆ ಈ ಬಾರಿ ನಜೀರ್, ನಸೀಬ್ ಕೆಟ್ಟಿತ್ತು. ತಾನು ಯೂಸ್ ಮಾಡ್ತಿದ್ದ ಬ್ಲೂ ಟೂತ್ ಕಾರಿನ ಸಿಸ್ಟಂಗೆ ಲಿಂಕ್ ಆಗಿದ್ದರಿಂದ ಈ ಸಿಸ್ಟಂ ಮಾಲೀಕರ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಆಗಿತ್ತು. ಇದೇ ಆಯಾಮದಲ್ಲಿ ಬ್ಯಾಟರಾಯನಪುರ ಇನ್ ಸ್ಪೆಕ್ಟರ್ ಶಂಕರ್ ನಾಯಕ್, ಫಾಲೋ ಮಾಡಿ ಬಂಧಿಸಿ 2 ದ್ವಿಚಕ್ರ ವಾಹನ, 1 ಕಾರು ವಶಪಡಿಸಿ ತನಿಖೆ ನಡೆಸ್ತಿದ್ದಾರೆ.
PublicNext
23/02/2022 10:20 am