ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೇಫ್ಟಿ ಪಿನ್ ನಲ್ಲೇ ಬೈಕ್‌ ಸ್ಟಾರ್ಟ್!;‌ ಕ್ಷಣಾರ್ಧದಲ್ಲೇ ದ್ವಿಚಕ್ರ ʼಮಾಯʼ

ಬೆಂಗಳೂರು: ಬೈಕ್ ಕದಿಯೋಕೂ ಒಂದಷ್ಟು ಟ್ರೈನಿಂಗ್ ಬೇಕು. ಇಲ್ಲದಿದ್ದರೆ ಕಳ್ಳರು ಲಾಕ್ ಆಗೋದು ಪಕ್ಕಾ. ಒಂದೇ ಕ್ಷಣದಲ್ಲಿ ಒಂದು ಸಣ್ಣ ಸೇಫ್ಟಿ ಪಿನ್ ಬಳಸಿ ಬೈಕ್ ಕದ್ದು ಎಸ್ಕೇಪ್ ಆಗ್ತಿದ್ದ ಚಾಲಾಕಿ ಕಳ್ಳನನ್ನು ಕೆ.ಜಿ. ಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ.

ಜೈಲಿನಲ್ಲಿ ಸಿಕ್ಕ ಇನ್ನೊಬ್ಬ ಕಳ್ಳನಿಂದ ಸ್ಫೂರ್ತಿಗೊಂಡು ಸೇಫ್ಟಿ ಪಿನ್ ಬಳಸಿ ಕಿಶೋರ್ ಹಾಗೂ ಪ್ರವೀಣ್ ಬೈಕ್ ಎಗರಿಸುತ್ತಿದ್ರು. ಸದ್ಯ, ಬಂಧಿತರಿಂದ 15 ಲಕ್ಷ ಮೌಲ್ಯದ 18 ಬೈಕ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಕ್ ಕದಿಯುವುದೇ ಕಾಯಕ ಮಾಡಿಕೊಂಡಿದ್ದ ಕಿಶೋರ್ ಒಂದೆರಡು ವರ್ಷಗಳಿಂದ ನಗರದ ವಿವಿಧೆಡೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನು ಎಗರಿಸಿ ಜೈಲುಪಾಲಾಗಿದ್ಸ. ಜೈಲಿನಲ್ಲಿ ಬೈಕ್ ಲಾಕ್ ಓಪನ್ ಮಾಡೋದು ಕಲಿತ ಕಿಶೋರ್, ಹೊರಬಂದು ಅದನ್ನ ಯಥಾವತ್ತಾಗಿ ಕಾರ್ಯರೂಪಕ್ಕೆ ತಂದಿದ್ದ. ಆರೋಪಿಗಳ ಬಂಧನದಿಂದ ಕೆ.ಜಿ.ಹಳ್ಳಿ, ಹೈಗ್ರೌಂಡ್ಸ್ , ಬಾಣಸವಾಡಿ, ಕೆಂಗೇರಿ ಸೇರಿ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 18ಕ್ಕೂ ಹೆಚ್ಚು ಪ್ರಕರಣಗಳು ಸಾಟ್ ಔಟ್ ಆಗಿದೆ.

Edited By : Nagesh Gaonkar
PublicNext

PublicNext

15/02/2022 06:00 pm

Cinque Terre

34.51 K

Cinque Terre

0

ಸಂಬಂಧಿತ ಸುದ್ದಿ