ಬೆಂಗಳೂರು:ಗೋಲ್ಡ್ ಲೋನ್ ಕಂಪನಿ ದಿವಾಕರ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ರಿಂದ ಮತ್ತಿಬ್ಬರು ಆರೋಪಿಗಳ ಬಂಧನವಾಗಿದೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಪತ್ನಿ ರಕ್ಷಿತಾ ಮತ್ತು ಅತ್ತೆ ಗೌರಮ್ಮ ಬಂಧನವಾಗಿದೆ. ದಿವಾಕರ್ ಕೊಲೆ ದಿನ ಮಂಜುನಾಥ್ ಪತ್ನಿ ರಕ್ಷಿತಾ ಮನೆಯಲ್ಲೆ ಇದ್ರು. ಕೊಲೆ ನಂತರ ರಕ್ಷಿತಾ, ತಾಯಿ ಗೌರಮ್ಮ ಜೊತೆ ಸೇರಿ ಮನೆಯಲ್ಲಿದ್ದ ರಕ್ತಕಲೆಯನ್ನು ಕ್ಲೀನ್ ಮಾಡಿ ಐದು ಲಕ್ಷ ಹಣದೊಂದಿಗೆ ಮನೆ ಖಾಲಿ ಮಾಡಿದ್ರು. ಸದ್ಯ ಸಾಕ್ಷ್ಯ ನಾಶ ಹಾಗೂ ಕೊಲೆಗೆ ಸಹಕಾರ ಹಿನ್ನೆಲೆ ಗೌರಮ್ಮ ಹಾಗೂ ರಕ್ಷಿತಾಳನ್ನು ಪೊಲೀಸ್ರು ಬಂಧಿಸಿದ್ದಾರೆ.
ಒಟ್ಟಾರೆ ಮಂಜುನಾಥ್,ಮುನಿರಾಜು,ರಕ್ಷಿತಾ,ಗೌರಮ್ಮ ಸೇರಿ ನಾಲ್ವರು ಅರೆಸ್ಟ್ ಆಗಿದ್ದಾರೆ. 5 ಲಕ್ಷ ಹಣಕ್ಕಾಗಿ ಗೋಲ್ಡ್ ಲೋನ್ ನೀಡೋ ಕಂಪನಿ ಉದ್ಯೋಗಿ ದಿವಾಕರ್ ಶೆಟ್ಟಿಯನ್ನು ಜನವರಿ 20 ರಂದು ಸುಂಕದಕಟ್ಟೆಯಲ್ಲಿ ಕೊಲೆ ಮಾಡಲಾಗಿತ್ತು.ಕೊಲೆ ಮಾಡಿ ಮೃತದೇಹ ಮಾಗಡಿ ಹೊನ್ನಾಪುರ ಕೆರೆಗೆ ಎಸೆದಿದ್ದರು.
PublicNext
11/02/2022 04:19 pm