ಬೆಂಗಳೂರು: ಸೇಡಂ ಶಾಸಕ ರಾಜ್‌ಕುಮಾರ್ ಪಾಟೀಲ್ ತಮ್ಮ ಮೇಲೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬ ಪ್ರಕರಣ ಕುರಿತಂತೆ ಎರಡು ಕಡೆ ದೂರು ದಾಖಲಾಗಿದೆ. ಈ ಬಗ್ಗೆ ಎಫ್ಐಆರ್ ಕೂಡ ದಾಖಲಿಸಿದ್ದೇವೆ. ವಿಧಾನ ಸೌಧ ಠಾಣೆ ಪೊಲೀಸರು ಈ ಬಗ್ಗೆ ಮಹಿಳೆಯ ಹೇಳಿಕೆ ದಾಖಲಿಸಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳೆ ಕೊಟ್ಟ ದೂರನ್ನು ಯಲಹಂಕ ಎಸಿಪಿ ಅವರಿಗೆ ವಹಿಸಲಾಗಿದೆ. ಅವರು ನೋಟೀಸ್ ಕೊಟ್ಟರೂ ಮಹಿಳೆ ವಿಚಾರಣೆಗೆ ಬಂದಿಲ್ಲ. ಮಹಿಳೆ ಠಾಣೆಗೆ ಬಂದು ಏನಾಗಿದೆ ಅಂತ ಮಾಹಿತಿ ನೀಡಿದ್ದಲ್ಲಿ ತನಿಖೆ ಸುಗಮವಾಗುತ್ತದೆ ಎಂದು ಪಂತ್ ಹೇಳಿದ್ದಾರೆ.
Kshetra Samachara
09/02/2022 06:41 pm