ಯಲಹಂಕ:- ಬಿಲ್ಡಿಂಗ್ ಕನ್ಸ್ಟ್ರಕ್ಷನ್ ವ್ಯವಹಾರದ ಬಾಕಿ ಉಳಿಸಿಕೊಂಡ 33ಲಕ್ಷ ಹಣ ವ್ಯಕ್ತಿಯೊಬ್ಬನ ಪ್ರಾಣಕ್ಕೆ ಕುತ್ತು ತಂದಿರುವ ಘಟನೆಯ ಕಹಾನಿ ಇದು. ಮಾಡಿರೊ ಕೆಲಸದ ಹಣ ನೀಡಿಲ್ಲ ಎಂದು ಕೆಲಸ ನೀಡಿದ ವ್ಯಕ್ತಿಯನ್ನೇ ಅಪಹರಿಸಿದ್ದ ಮಂದಿಯನ್ನು ದೂರು ಬಂದ 3ಗಂಟೆಯೊಳಗೆ ಯಲಹಂಕ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಗರದ ಬಾಣಸವಾಡಿಯ ಸೈಟ್ ನಲ್ಲಿ ಬಿಲ್ಡಿಂಗ್ ಕನ್ಸಸ್ಟ್ರಕ್ಷನ್ಸ್ ಕೆಲಸ ನಡೆಯುತ್ತಿತ್ತು. ಇಲ್ಲಿ ನಂದ ಎಂಬಾತ ಸೈಟ್ ಇಂಜಿನಿಯರ್ ಮಾನಸ್ ಬಳಿ ಸಬ್ ಕಾಂಟ್ರಾಕ್ಟ್ ಪಡೆದು ಕೆಲಸ ಮಾಡ್ತಿದ್ದ, 50ಲಕ್ಷದ ಕೆಲಸ ಮುಗಿಸಿ, 17ಲಕ್ಷ ಮಾತ್ರ ಪಡೆದಿದ್ದ ನಂದ 33ಲಕ್ಷಕ್ಕಾಗಿ ಮಾನಸ್ ಬಳಿ ಕೇಳಿದ್ದಾನೆ. ಕೆಲಸ ಸರಿಯಾಗಿ ಮಾಡಿಲ್ಲ, ಇಷ್ಟೇ ಕೊಡೋದು ಎಂದು ಮಾನಸ್ ಅಂದಿದ್ದ.ಇದರಿಂದ ರೊಚ್ಚಿಗೆದ್ದ ನಂದ ಹಾಗೂ ಆತನ ತಂಡ ಎರಡು ದಿನಗಳ ಹಿಂದೆ ಮಾನಸ್ ನನ್ನು ಯಲಹಂಕ ಪೊಲೀಸ್ ವ್ಯಾಪ್ತಿ, ರೈತರ ಸಂತೆ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಿಂದ ಅಪಹರಿಸಿದ್ದರು.
ಕೇಸ್ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಸಿಸಿಟಿವಿ ಆಧಾರದ ಮೇರೆಗೆ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ಡಬ್ಲೂಪಿಎಸ್ಐ ಶೈಲಜಾರ ತಂಡ ಆರೋಪಿಗಳ ಜಾಡು ಹಿಡಿದಿದ್ದಾರೆ.ಕಿಡ್ನಾಪ್ ಆದ ಮೇಲೂ ಆನ್ ನಲ್ಲಿದ್ದ ನಂದ & ಮಾನಸ್ ಮೊಬೈಲ್ಗಳ ಟವರ್ ಲೊಕೇಷನ್ ಆಧಾರದ ಮೇಲೆ ಕೋಲಾರದ ಟೋಲ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ..
ದೂರು ಬಂದ 3ಗಂಟೆಯೊಳಗೆ ಮಾನಸ್ ಅಪಹರಣ ಪ್ರಕರಣ ಸುಖಾಂತ್ಯವಾಗಿದೆ. ಬರಬೇಕಿದ್ದ ಹಣ ಪಡೆಯಲು ಅನ್ಯಮಾರ್ಗ ಹಿಡಿದು ಪೇಚಿಗೆ ಸಿಲುಕಿದ ನಂದ ಮತ್ತು ಇತರೆ 4 ಜನ ಕಂಬಿ ಎಣಿಸುವಂತಾಗಿದೆ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್
PublicNext
04/02/2022 06:43 pm