ಬೆಂಗಳೂರು : ಇದನ್ನ ವಿಕೃತಿ ಅನ್ನಬೇಕೋ ಅವಿವೇಕಿತನ ಅನ್ನಬೇಕೋ ಗೊತ್ತಿಲ್ಲ, ಆತನಿಗಿದ್ದ ಆಸೆ ಕೇಳಿದ್ರೆ ಒಂದು ರೀತಿ ಅಚ್ಚರಿ ಆಗುತ್ತೆ ಅದು ಹೆಂಡತಿ ಪರಪುರುಷರ ಜೊತೆಗಿನ ಏಕಾಂತದ ವಿಡಿಯೋವನ್ನ ಮೊಬೈಲ್ ನಲ್ಲಿ ಲೈವ್ ನೋಡುವ ಹುಚ್ಚು ಆತನಿಗೆ. ಜೊತೆಗೆ ಅದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ವೈಫ್ ಸ್ವಾಪಿಂಗ್ ಗೆ ಅಹ್ವಾನ ನೀಡಿ ದಂಧೆ ನಡೆಸುವುದನ್ನು ಆಗ್ನೇಯ ವಿಭಾಗ ಪೊಲೀಸರು ಬಯಲಿಗೆಳೆದಿದ್ದಾರೆ.
ಸದ್ಯ ಪೊಲೀಸರ ಅತಿಥಿಯಾಗಿರುವ ಆರೋಪಿಯ ಹಿಸ್ಟರಿ ಹೀಗಿದೆ ನೋಡಿ..
ನಗರದಲ್ಲಿ ಹೈಟೆಕ್ ವೈಫ್ ಸ್ವಾಪಿಂಗ್ ನಡೆಯುತ್ತಿರುವ ಬಗ್ಗೆ ಟ್ವೀಟರ್ ನಲ್ಲಿ ಆರೋಪಿಯೇ ಪೋಸ್ಟ್ ಮಾಡಿದ್ದನ್ನು ಸಾರ್ವಜನಿಕರೊಬ್ಬರು ನಗರ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಬಳಿಕ ಖಚಿತ ಮಾಹಿತಿ ಮೇರೆಗೆ ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿನಯ್ ಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ತಿಂಗಳಿಂದ ಫ್ಯಾಂಟಸಿಗಾಗಿ ದಂಧೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ವಿನಯ ಕುಮಾರ ವೃತ್ತಿಯಲ್ಲಿ ಸೇಲ್ಸ್ ಮನ್ 2019 ರಲ್ಲಿ ಪೋಷಕರ ವಿರೋಧದ ನಡುವೆ ಲವ್ ಮ್ಯಾರೇಜ್ ಆಗಿದ್ದ ಆರೋಪಿ. ಇತನಿಗೆ ಪೋರ್ನ್ ವಿಡಿಯೋ ನೋಡುವ ಚಟ. ತನ್ನ ಪತ್ನಿ ದಂಧೆಗೆ ಒಪ್ಪಿಸಿ ಮುಖ ಚಹರೆ ಕಾಣದ ಹಾಗೆ ವಿಡಿಯೋ ಮಾಡಿಕೊಳ್ಳುತ್ತಿದ್ದ.
ವಿಪರ್ಯಾಸ ಎಂದರೆ ಪತಿ ಫ್ಯಾಂಟಸಿ ಸೆಕ್ಸ್ ಗೆ ಪ್ರಚೋದಿಸುತ್ತಿದ್ದಂತೆ ಪತ್ನಿ ಕೊಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಳು. ಇದನ್ನೇ ಆದಾಯದ ಮೂಲವನ್ನಾಗಿಸಿಕೊಂಡ ಈ ಜೋಡಿ ಹೈಟೆಕ್ ಮಾದರಿಯಲ್ಲಿ ವೈಫ್ ಸ್ವಾಪಿಂಗ್ ದಂಧೆ ನಡೆಸುತ್ತಿತ್ತು.
ಇತ್ತಿಚೆಗೆ ಆರೋಪಿ ಟ್ವೀಟರ್ ನಲ್ಲಿ ಜಾಹ್ನವಿ ಹೆಸರಿನಲ್ಲಿ ವೈಫ್ ಸ್ವಾಪಿಂಗ್ ಬಗ್ಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದ.ಹೆಂಡ್ತಿ ಪರಪುರುಷನ ಜೊತೆ ಹಾಸಿಗೆ ಹಂಚಿಕೊಂಡಾಗ ಲೈವ್ ವಿಡಿಯೊ ಮಾಡಿ ಟ್ವೀಟರ್ ನಲ್ಲಿ ಹಾಕಿರುವ ಮಾಹಿತಿ ಕಂಡು ಗ್ರಾಹಕರು ಆರೋಪಿಯನ್ನು ಸಂಪರ್ಕಿಸುತ್ತಿದ್ದರು.
ಬಳಿಕ ಮನೆಗೆ ಕರೆಸಿಕೊಂಡು ಹೆಂಡ್ತಿ ಜೊತೆ ಸೆಕ್ಸ್ ಮಾಡುವಾಗ ಲೈವ್ ವಿಡಿಯೊ ಮಾಡುವುದಾಗಿ ಹೇಳುತ್ತಿದ್ದ. ಕೆಲ ಗ್ರಾಹಕರು ಒಪ್ಪಿಕೊಂಡಾಗ ಮೊಬೈಲ್ ನಲ್ಲಿ ವಿಡಿಯೊ ಮಾಡಿ ತನ್ನ ವಿಕೃತ ಬಯಕೆ ಈಡೇರಿಸಿಕೊಳ್ಳುತ್ತಿದ್ದ. ಇಂಟರೆಸ್ಟಿಂಗ್ ವಿಚಾರವೆಂದರೆ ಹಣಕ್ಕಾಗಿ ಕಸ್ಟಮರ್ ಗಳಿಗೆ ಡಿಮ್ಯಾಂಡ್ ಮಾಡದ ಈ ಜೋಡಿ ಗ್ರಾಹಕ ಕೊಟಸ್ಟು ಹಣ ಪಡೆದು ತೃಪ್ತಿಪಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
04/02/2022 10:36 am