ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:‌ "ನಾಯಿಗಳನ್ನು ಕಂಡರೆ ಆಗ್ತಿರ್ಲಿಲ್ಲ. ಅದಕ್ಕೆ ಸಾಯಿಸಿದೆ"; ಬಂಧಿತ ಆದಿ ನಾರಾಯಣ

ಬೆಂಗಳೂರು: ಉದ್ದೇಶಪೂರ್ವಕವಾಗಿಯೇ ನಾಯಿಯ ಮೇಲೆ ಕಾರು ಹತ್ತಿಸಿ, ಕೊಂದಿದ್ದ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸರು

ಉದ್ಯಮಿ ದಿವಂಗತ ಆದಿಕೇಶವಲು ಅವರ ಮೊಮ್ಮಗ ಆದಿ ನಾರಾಯಣನನ್ನು ಬಂಧಿಸಿದ್ದಾರೆ.

ಜ.26ರಂದು ಜಯನಗರ 1ನೇ ಹಂತ ರಸ್ತೆಬದಿ‌ ಮಲಗಿದ್ದ ಶ್ವಾನದ ಮೇಲೆ ಉದ್ದೇಶಪೂರ್ವಕವಾಗಿ ತನ್ನ ಆಡಿ ಕಾರನ್ನು ಹತ್ತಿಸಿದ್ದ ಆದಿ ನಾರಾಯಣನ ವಿರುದ್ಧ ಸಿದ್ಧಾಪುರ ಬದ್ರಿ ಎಂಬವರು ಪೊಲೀಸ್‌ ಠಾಣೆಗೆ ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. "ನಾಯಿಗಳನ್ನು ಕಂಡರೆ ಆಗ್ತಿರ್ಲಿಲ್ಲ. ಅದಕ್ಕೆ ಸಾಯಿಸಿದೆ" ಅಂತ ಈ ಆದಿ ನಾರಾಯಣ ಪೊಲೀಸರ ಮುಂದೆ ಉಡಾಫೆ, ಅಮಾನವೀಯತೆಯ ಉತ್ತರ ಕೊಟ್ಟಿದ್ದಾನೆ!

Edited By : Manjunath H D
PublicNext

PublicNext

31/01/2022 09:07 pm

Cinque Terre

56.8 K

Cinque Terre

31

ಸಂಬಂಧಿತ ಸುದ್ದಿ