ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಆನ್ ಲೈನ್ ವಂಚಕರಿದ್ದಾರೆ...; ಎಚ್ಚರೆಚ್ಚರ..!!

ಯಲಹಂಕ: ಎಲ್ಲಿಯವರೆಗೂ ನಾವು ಮೋಸ ಹೋಗ್ತೇವೊ ಅಲ್ಲಿಯವರೆಗೂ ನಮ್ಮನ್ನ ವಂಚಕರು ಮೋಸ ಮಾಡ್ತಾನೇ ಇರ್ತಾರೆ. ಯಲಹಂಕದ ರೇವಾ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಗೆ ಸೇರಲು ಯುವತಿ ಬಯಸಿದ್ದಳು. C.S. ಬದಲಿಗೆ ECM‌ ಕೋರ್ಸ್ ಸೀಟ್ ಸಿಕ್ಕಿತ್ತು. C.S. ಕೋರ್ಸೇ ಬೇಕೆಂದು ಯುವತಿ ಪ್ರಯತ್ನಿಸುತ್ತಿದ್ದಳು.

ಈ ವಿಷಯ ತಿಳಿದುಕೊಂಡ ಆಸಾಮಿ ಯುವತಿಯ ತಂದೆ ಮೊಬೈಲ್ ಗೆ BPADDPRV ಸೀಟ್ ಗಾಗಿ ಕರೆಮಾಡಿ ಎಂದು ಮೆಸೇಜ್ ಮಾಡಿದ್ದ. ಇದನ್ನೇ ನಿಜ ಎಂದು ನಂಬಿದ ಪೋಷಕರು, ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ವಂಚಕ ನಿಮಗೆ ಸೀಟ್ ಕನ್ಫರ್ಮೇಷನ್ ಗಾಗಿ ನೀವು 127500 ರೂ. ಟ್ರಾನ್ಸ್ಫರ್ ಮಾಡಿ ಎಂದಿದ್ದ. ಕೂಡಲೇ ತಂದೆ ಹಣ ಟ್ರಾನ್ಸ್ಫರ್ ಮಾಡಿದ್ದರು. ಎರಡು ದಿನಗಳ ನಂತರ ಕಾಲ್ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಬರ್ತಿತ್ತು!

ಕೂಡಲೇ ಯುವತಿಯ ಪೋಷಕರು ರೇವಾ ಕಾಲೇಜ್ ಗೆ ತೆರಳಿ, ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಯಲಹಂಕದ CEN ಪೊಲೀಸ್ ಠಾಣೆಗೆ ತೆರಳಿ ವಂಚನೆ ಕೇಸ್ ದಾಖಲಿಸಿದ್ದಾರೆ.

ದೂರು ಪಡೆದ CEN ಪೊಲೀಸರು ಆರೋಪಿ ಬೆಂಗಳೂರಿನ ಮಾರಗೊಂಡನಹಳ್ಳಿ ರಾಜೇಶ್ವರ್ ನನ್ನು ಬಂಧಿಸಿ, ಆತನಿಂದ ವಂಚನೆಗೆ ಬಳಸುತ್ತಿದ್ದ 3 ಮೊಬೈಲ್, 4 ಲ್ಯಾಪ್ ಟಾಪ್, 7 ಸಿಮ್ ಕಾರ್ಡ್, 21 ಗ್ರಾಂ ಚಿನ್ನ, 3 ಚಿನ್ನದ ನಾಣ್ಯ, 172500 ನಗದನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ, ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಪೋಷಕರು ಈ ರೀತಿಯ ವಂಚನೆಗೆ ಒಳಗಾಗಬೇಡಿ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Edited By :
PublicNext

PublicNext

30/01/2022 03:35 pm

Cinque Terre

16.12 K

Cinque Terre

0

ಸಂಬಂಧಿತ ಸುದ್ದಿ