ಯಲಹಂಕ: ದೌರ್ಜನ್ಯದಿಂದ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುವಾಗ ತಡೆಯಲು ಹೋದವರಿಗೆ ತನ್ನ ಪ್ಯಾಂಟ್ ಜಿಪ್ ತೆಗೆದು ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತನೆ ತೋರಿಸಿದಲ್ಲದೆ, ಅವಾಚ್ಯ ಶಬ್ಬಗಳಿಂದ ಜಾತಿ ನಿಂದನೆಯ ಆರೋಪ ಕೇಳಿ ಬಂದಿದೆ.
ಯಲಹಂಕ ತಾಲೂಕು ಹೊನ್ನೇನಹಳ್ಳಿಯ ಗ್ರಾಮದ ಪರಿಶಿಷ್ಟ ಸಮುದಾಯದ ಮುನಿಯಪ್ಪ ಎಂಬುವರು ದೌರ್ಜನ್ಯ ಮತ್ತು ಜಾತಿ ನಿಂದನೆಗೆ ಒಳಗಾಗಿದ್ದು ರಾಜಾನುಕುಂಟೆ ಪೊಲೀಸ್ ಠಾಣೆ ಯಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
ಹೊನ್ನೇನಹಳ್ಳಿಯ ಸರ್ವಣಿಯರಾದ ರಾಜಣ್ಣ ಮತ್ತು ಆತನ ಸಹೋದರರು ಮುನಿಯಪ್ಪನ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಮುನಿಯಪ್ಪನವರ ತಾತ ದೊಡ್ಡನಂಜಪ್ಪ ನವರಿಗೆ ಸರ್ಕಾರದಿಂದ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 83 ರಲ್ಲಿ 4 ಎಕರೆ 7 ಗುಂಟೆ ತಳವಾರ ತೋಟಿ ಇನಾಮ್ತಿ ಜಮೀನು ಮಂಜೂರಾಗಿತ್ತು,ಆದರೆ ಈ ಜಮೀನು ತನಗೆ ಸೇರಿದ್ದೆಂದು ರಾಜಣ್ಣ ಕೋರ್ಟ್ ಗೆ ಹೋಗಿದ್ರು. ಆದರೆ ಕೋರ್ಟ್ ನಲ್ಲಿ ರಾಜಣ್ಣನ ಅರ್ಜಿ ವಜಾ ಆಗಿದೆ.
ನ್ಯಾಯಾಲಯ ಆದೇಶವನ್ನ ಉಲ್ಲಂಘಿಸಿದ ರಾಜಣ್ಣ ದಿನಾಂಕ 13/11/ 2021 ರಂದು ಅಕ್ರಮವಾಗಿ ರಸ್ತೆ ನಿರ್ಮಿಸಲು ಮುಂದಾಗಿದ್ದಾನೆ. ಇದೇ ವೇಳೆ ರಸ್ತೆ ನಿರ್ಮಾಣವನ್ನ ಮುನಿಯಪ್ಪನ ಕುಟುಂಬದವರು ತಡೆಯಲು ಹೋದಾಗ ರಾಜಣ್ಣ ತನ್ನ ಪ್ಯಾಂಟ್ ಜಿಪ್ ತೆಗೆದು ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತನೆ ಮಾಡಿದ್ದಲ್ಲದೆ. ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾನೆಂಬುದು ಮುನಿಯಪ್ಪನ ಕುಟುಂಬದ ಆರೋಪವಾಗಿದೆ.
PublicNext
28/01/2022 03:17 pm