ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದೇಶಿ ಕರೆನ್ಸಿ ಸಾಗಾಟ : ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ

ದೇವನಹಳ್ಳಿ : ಬರೋಬ್ಬರಿ 24 ಲಕ್ಷ ವಿದೇಶಿ ಕರೆನ್ಸಿ ಹಣ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿದ ಪ್ರಯಾಣಿಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್ ಐ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಜನವರಿ 21 ರಂದು ಮುಂಬೈ ನಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಇಲ್ಲಿಂದ ದುಬೈಗೆ ಪ್ರಯಾಣಿಸುತ್ತಿದ್ದ, ಈ ವೇಳೆ ವಿದೇಶಿ ಕರೆನ್ಸಿಯನ್ನ ಅಕ್ರಮ ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಮೇರೆಗೆ ಡಿಆರ್ ಐ ಅಧಿಕಾರಿಗಳು ಪ್ರಯಾಣಿಕನನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾಗ, ಲಾಗೇಜ್ ನಲ್ಲಿದ್ದ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯಿಂದ 24, 32, 730 ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.

Edited By : Nirmala Aralikatti
Kshetra Samachara

Kshetra Samachara

23/01/2022 08:41 am

Cinque Terre

564

Cinque Terre

0

ಸಂಬಂಧಿತ ಸುದ್ದಿ