ಯಲಹಂಕ: ಅಮೆಜಾನ್ ಕಂಪನಿಗೆ ನಿಮ್ಮ ಅಂಗಡಿಯ ಜಾಗ ಬಾಡಿಗೆಗೆ ನೀಡಿದರೆ, ನಿಮಗೆ ಹೆಚ್ಚು ಬಾಡಿಗೆ ಬರುತ್ತೆ ಎಂದು ನಂಬಿಸಿದ್ದ ಪ್ರದೀಪ್ 49000 ಹಣವನ್ನು ತನ್ನ ಖಾತೆಗೆ ಟ್ರಾನ್ಸ್ಫರ್ ಮಾಡಿಕೊಂಡು ಮೋಸ ಮಾಡಿ ಎಸ್ಕೇಪ್ ಆಗಿದ್ದ.. ತಿಂಗಳ ನಂತರ ಪೇಟಿಎಂ ಮತ್ತು ಪೋಸ್ಟ್ ಪೇಯವರು ಪಿರ್ಯಾದಿಗೆ ಆನ್ಲೈನ್ ಲೋನ್ ಪಡೆದಿದ್ದೀರಾ, ಸಾಲ ಕಟ್ಟಿ ಎಂದಾಗ ಮೋಸ ಹೋಗಿರುವುದು ಕನ್ಫರ್ಮ್ ಆಗಿತ್ತು.. ಈ ಬಗ್ಗೆ ವಿದ್ಯಾರಣ್ಯಪುರದ ಪಿರ್ಯಾದಿ ಆನ್ಲೈನ್ ವಂಚನೆ ಬಗ್ಗೆ ಯಲಹಂಕದ CEN ಪೊಲೀಸ್ ಠಾಣೆಗೆ ದೂರು ನೀಡಿದ್ದರು..
ದೂರಿನ ವಿಚಾರಣೆ ನಡೆಸಿದ ಯಲಹಂಕ ಸೈಬರ್ ಕ್ರೈಮ್ ಪೊಲೀಸರು ಈದೀಗ ಆರೋಪಿಯನ್ನು ಬಂಧಿಸಿ 30000 ನಗದನ್ನು ವಶಕ್ಕೆ ಪಡೆದು, ಆರೋಪಿಯನ್ನು ಜೈಲಿಗಟ್ಟಿದ್ದಾರೆ.
Kshetra Samachara
22/01/2022 11:31 am