ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಅತ್ತಿಬೆಲೆ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಮುತ್ತಿಗೆ ಹಾಕಿದ ಕೆಆರ್ಎಸ್

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಕೆಆರ್ಎಸ್ ಪಕ್ಷದವತಿಯಿಂದ ಮುತ್ತಿಗೆ ಹಾಕಲಾಯಿತು.

ಆರ್‌ಟಿಓ ಚೆಕ್‌ಪೋಸ್ಟ್‌ನಲ್ಲಿ ನಡೆಯುತ್ತಿರುವಂತಹ ಭ್ರಷ್ಟಾಚಾರದ ಕುರಿತು ಅನೇಕ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಇಂದು ಕೆಆರ್ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣರೆಡ್ಡಿ ಅವರ ನೇತೃತ್ವದಲ್ಲಿ ಅತ್ತಿಬೆಲೆ ಚೆಕ್ ಪೋಸ್ಟ್‌ಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಆರ್‌ಟಿಓ ಕಚೇರಿಗೆ ಮುತ್ತಿಗೆ ಹಾಕಿದ ರವಿಕೃಷ್ಣಾರೆಡ್ಡಿ ಅವರು ಕೇಳಿದ ಅನೇಕ ಪ್ರಶ್ನೆಗಳಿಗೆ ಅಲ್ಲಿನ ಸಿಬ್ಬಂದಿ ಉತ್ತರವನ್ನು ನೀಡಲಾಗದೆ ತಬ್ಬಿಬ್ಬಾದರು. ಜೊತೆಗೆ ಅಲ್ಲಿನ ಸಿಬ್ಬಂದಿಗೆ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ನಡೆಯುತ್ತಿರುವಂತಹ ಅಕ್ರಮಗಳ ಕುರಿತು ಭ್ರಷ್ಟಾಚಾರವನ್ನು ಈ ಕೂಡಲೇ ನಿಲ್ಲಿಸಬೇಕು. ಭ್ರಷ್ಟಾಚಾರ ದೊಡ್ಡವರಿಂದ ಸಣ್ಣವರ ವರೆಗೂ ಎಲ್ಲೆಡೆ ಹಬ್ಬಿದೆ ಅಧಿಕಾರಿಗಳು ಭ್ರಷ್ಟಾಚಾರವನ್ನು ಈ ಕೂಡಲೇ ನಿಲ್ಲಿಸಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Edited By : Manjunath H D
PublicNext

PublicNext

07/01/2022 08:36 pm

Cinque Terre

45.55 K

Cinque Terre

0

ಸಂಬಂಧಿತ ಸುದ್ದಿ