ದೊಡ್ಡಬಳ್ಳಾಪುರ: ಪಟ್ಟಣದಲ್ಲಿ ಬೆಳೆದಿದ್ದ ಹೆಂಡತಿಗೆ ವಾರಕ್ಕೊಮ್ಮೆಯಾದ್ರೂ ಹೊಟೇಲ್ ನಲ್ಲಿ ಊಟ ಮಾಡುವ ಆಸೆ. ಹಳ್ಳಿಯವನಾದ ಗಂಡ, ಹೆಂಡತಿಯ ಆಸೆಗೆ ತಣ್ಣೀರು ಎರಚಿದ. ಪರಿಣಾಮ ಹೆಂಡತಿ ಎರಡು ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣು!
ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಂ ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಹಳ್ಳಿ ಗಂಡನ ವರ್ತನೆಗೆ ಬೇಸತ್ತ ಸಂಧ್ಯಾ(24), ಪುತ್ರಿ ಕುಸುಮಾ(4), ಪುತ್ರ ರೋಹಿತ್(2) ಅವರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ತಾನೂ ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯಲಹಂಕದ ಮಾರುತಿ ನಗರದ ಸಂಧ್ಯಾಗೆ 5 ವರ್ಷದ ಹಿಂದೆ ಎಸ್ ಎಂ ಗೊಲ್ಲಹಳ್ಳಿಯ ಶ್ರೀಕಾಂತ್ ಜೊತೆ ಮದುವೆಯಾಗಿತ್ತು. ಪಟ್ಟಣದಲ್ಲಿ ಬೆಳೆದಿದ್ದ ಸಂಧ್ಯಾಳಿಗೆ ವಾರಕ್ಕೊಮ್ಮೆ ಅಥವಾ 2 ಬಾರಿ ಹೊರಗಡೆ ಹೋಗಿ ಹೊಟೇಲ್ ನಲ್ಲಿ ಊಟ ಮಾಡುವ ಅಭ್ಯಾಸ ಇತ್ತು. ಮದುವೆ ನಂತರವೂ ಗಂಡನಿಗೆ ಹೊರಗಡೆ ಊಟಕ್ಕೆ ಕರೆದೊಯ್ಯಲು ಹೇಳಿದ್ದಳು.
ಹಳ್ಳಿಯವನಾದ ಗಂಡ ಹೊಟೇಲ್ ಊಟಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಇದರಿಂದ ಜೀವನದಲ್ಲಿಯೇ ಜಿಗುಪ್ಸೆಗೊಂಡ ಸಂಧ್ಯಾ, ನಿನ್ನೆ ಮಧ್ಯಾಹ್ನ ಮನೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಕೊಂಡಿದ್ದಾಳೆ. ಗಂಭೀರ ಗಾಯಗೊಂಡ ಮೂವರನ್ನೂ ನೆರೆಹೊರೆಯವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
06/01/2022 10:12 am