ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಅನೇಕಲ್ ತಾಲೂಕಿನ ಜಿಗಣಿ ಬಳಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಮೇಲ್ನೋಟಕ್ಕೆ ಇದು ಅನೈತಿಕ ಸಂಬಂಧಕ್ಕೆ ನಡೆದ ಕೊಲೆ ಎನ್ನಲಾಗಿದೆ. ಜಿಗಣಿ ನಿವಾಸಿ 40 ವರ್ಷ ವಯಸ್ಸಿನ ಅರ್ಚನಾ ರೆಡ್ಡಿ ಎಂಬುವವರೇ ಅಮಾನುಷವಾಗಿ ಕೊಲೆಯಾದ ಮಹಿಳೆ.
ಮೊದಲನೇ ಗಂಡನಿಂದ ಡೈವೋರ್ಸ್ ಪಡೆದ ಈಕೆ ನವೀನ್ ಎಂಬ ವ್ಯಕ್ತಿಯನ್ನ ಎರಡನೇ ಮದುವೆಯಾಗಿದ್ದಳು ಎಂಬ ಮಾಹಿತಿ ಇದೆ. ನವೀನ್ ಹಾಗೂ ಸಂತೋಷ್ ಎನ್ನುವವರೇ ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹೊಸರೋಡ್ ಜಂಕ್ಷನ್ ನಿಂದ ಜಿಗಣಿಯ ಹೆಚ್ ಎಚ್ ಎಸ್ ಆರ್ ಲೇಔಟ್ ಮನೆಗೆ ಹೋಗುವಾಗ ಬೈಕ್ ನಲ್ಲಿ ಬಂದ ಮೂವರು ವ್ಯಕ್ತಿಗಳು ಅರ್ಚನಾ ರೆಡ್ಡಿ ಯನ್ನ ಕೊಲೆ ಮಾಡಿರುವ ದೃಶ್ಯ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
28/12/2021 08:05 pm