ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಮಸ್ ಲ್‌ ಪೇಯ್ನ್‌, ಖಿನ್ನತೆಯೇ ಆತ್ಮಹತ್ಯೆಗೆ ಪ್ರೇರಣೆ!; ಬಿಇಒ ಡೆತ್‌ ನೋಟ್‌ ನಲ್ಲಿ ಅನಾವರಣ

ಯಲಹಂಕ: ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ NIT ಲೇಔಟ್ ಮನೆಯಲ್ಲಿ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಬೆಂಗಳೂರು ನಗರ ಜಿಲ್ಲೆ ಯಲಹಂಕ‌ ತಾಲೂಕಿ‌ನ ಬಿಇಒ ಕಮಲಾಕರ್ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಸಾವಿಗೆ

ಮಸ್ ಲ್ ಪೇಯ್ನ್ ಮತ್ತು ಮಾನಸಿಕ ಖಿನ್ನತೆಯೇ ಕಾರಣ ಎಂಬುದು ಡೆತ್‌ ನೋಟ್‌ ನಲ್ಲಿ ಬಹಿರಂಗಗೊಂಡಿದೆ.

ಕಮಲಾಕರ್ ತನ್ನ ಡಬಲ್ ಬ್ಯಾರೆಲ್ ಗನ್‌ ನಿಂದ ತಲೆಗೆ ಸ್ವಯಂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಟೆಂಕಬೈಲಿನ ಕಮಲಾಕರ್​​ಗೆ ಪತ್ನಿ ಮತ್ತು ಪುತ್ರ ಇದ್ದಾರೆ. 3 ವರ್ಷಗಳಿಂದ ಯಲಹಂಕದಲ್ಲಿ ಬಿಇಒ ಆಗಿ ಕೆಲಸ ಮಾಡುತ್ತಿದ್ದರು.

ಡೆತ್ ನೋಟ್ ನಲ್ಲಿ ಏನಿತ್ತು?: "ಅನಾರೋಗ್ಯದ ಸಮಸ್ಯೆ ಸಾಕಷ್ಟು ಕಾಡ್ತಿತ್ತು. ಇದುವರೆಗೂ 25 ಸಾವಿರಕ್ಕೂ ಹೆಚ್ಚು ಮಾತ್ರೆ ಸೇವಿಸಿದ್ದೇನೆ. ಅನಾರೋಗ್ಯದಿಂದ ಜೀವನವೇ ಸಾಕು ಅನ್ನಿಸಿದೆ. ನನ್ನ ಕುಟುಂಬದವರು ಇಲ್ಲಿವರೆಗೆ ನೋಡಿಕೊಂಡಿರೋದು ನಿಜಕ್ಕೂ ನನ್ನ ಅದೃಷ್ಟ. ಆದರೆ, ಅವರಿಗೆ ಇನ್ನೂ ಹೆಚ್ಚು ನೋವು ಕೊಡೋಕೆ ನನಗೆ ಇಷ್ಟವಿಲ್ಲ. ನಮ್ಮ ಮನೆಯವರು ಎಲ್ಲರೂ ತುಂಬಾ ಒಳ್ಳೆಯವರು. ಇನ್ಮುಂದೆ ಯಾರಿಗೂ ತೊಂದರೆ ಕೊಡಬಾರದು ಅಂತ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ".

Edited By : Nagesh Gaonkar
Kshetra Samachara

Kshetra Samachara

26/12/2021 10:41 pm

Cinque Terre

492

Cinque Terre

0

ಸಂಬಂಧಿತ ಸುದ್ದಿ