ಬೆಂಗಳೂರು: ತಮಿಳುನಾಡು ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ 11 ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಪೂರ್ವ ತಾಲೂಕಿನ ವೈಟ್ ಫೀಲ್ಡ್ ವಿಭಾಗದ ಮಹದೇವಪುರ, ಮಾರತ್ತಹಳ್ಳಿ ಸಹಿತ ವೈಟ್ ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ಲ್ಯಾಪ್ ಟಾಪ್ ಕಳವುಗೈಯುತ್ತಿದ್ದಈ ಕುಖ್ಯಾತ ಕಳ್ಳರನ್ನು ಬಂಧಿಸಲಾಗಿದ್ದು, ತಮಿಳುನಾಡಿನ ತಿರುಚ್ಚಿ ಬಳಿಯ ರಾಮ್ ಜಿ ನಗರ ಮೂಲದ ಖತರ್ನಾಕ್ ಗ್ಯಾಂಗ್ ಇದಾಗಿದೆ.
ತಮಿಳುನಾಡಿನ ಕೃಷ್ಣಗಿರಿ , ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಿಕ್ಕಮಂಗಳೂರು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿಯೂ ನಡೆದ ಅಪರಾಧ ಕೃತ್ಯಗಳಲ್ಲಿ ಹಾಗೂ 42ಕ್ಕೂ ಹೆಚ್ಚು ಪ್ರಕರಣದಲ್ಲಿಇವರೆಲ್ಲ ಭಾಗಿಯಾಗಿದ್ದಾರೆ. ಬಂಧಿತರಿಂದ 7 ಲಾಪ್ ಟಾಪ್, 50 ಸಾವಿರ ನಗದು, 1 ಐಪ್ಯಾಡ್, 1 ಕ್ಯಾಮೆರಾ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಜನಿಕಾಂತ್, ಸುಂದರ್ , ಸೆಂಥಿಲ್ ಕುಮಾರ್, ಗೋಪಾಲ, ವೆಂಕಟೇಶ್ , ಸುಬ್ರಹ್ಮಣಿ, ಶಿವಕುಮಾರ್, ಮುರಳಿ, ಮೂರ್ತಿ, ಮುರುಗನಂದಂ ಹಾಗೂ ಕುಮಾರ್ ಬಂಧಿತರು. ಮುಖ್ಯವಾಗಿ ಐಟಿ ನೌಕರರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಖದೀಮರದು ಕಳ್ಳತನವೇ ಮೂಲ ಉದ್ಯೋಗ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
PublicNext
26/12/2021 12:21 pm