ನೆಲಮಂಗಲ: ಗ್ರಾಮಗಳಲ್ಲಿ ಮೇಯಲು ಬಿಟ್ಟ ಹಸುಗಳನ್ನು ಕದ್ದು ವಾಹನ ಮೂಲಕ ಕಸಾಯಿಖಾನೆಗೆ ಸಾಗಾಟ ಮಾಡ್ತಿದ್ದ ಮೂವರು ಖದೀಮರು ಬೆಂಗಳೂರು ಉತ್ತರ ತಾಲ್ಲೂಕು ಸಿದ್ಧನಹೊಸಹಳ್ಳಿ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೆಲಮಂಗಲ ತಾಲ್ಲೂಕು ಇಸ್ಲಾಂಪುರ ಮೂಲದ ಅಸ್ಗರ್ ಪಾಷಾ (39), ಪರ್ವೇಜ್ @ ಸೋನು (18) ಹಾಗೂ ಗದಗ ಮೂಲದ ಸುನಿಲ್ (22) ಬಂಧಿತರು. ಸಾಗಾಟಕ್ಕೆ ಬಳಸಿದ 407 ವಾಹನ ವಶ ಪಡಿಸಿದ ಪೊಲೀಸರು, 5 ಹಸುಗಳನ್ನು ರಕ್ಷಿಸಿದ್ದು, ನೆಲಮಂಗಲದ ಅಂಚಿಪುರ ಗೋಶಾಲೆಗೆ ರವಾನಿಸುವುದಾಗಿ ತಿಳಿಸಿದ್ದಾರೆ.
ಬೆಂ.ಗ್ರಾ. ನೆಲಮಂಗಲ ಸುತ್ತಮುತ್ತಲ ಗ್ರಾಮ, ಬೆಂಗಳೂರು ಉತ್ತರ ತಾಲ್ಲೂಕಿನ ಲಕ್ಷ್ಮೀಪುರ, ಹೆಗ್ಗಡದೇವನಪುರ ಸಹಿತ ಇನ್ನೂ ಹಲವೆಡೆ ಹಸು ಕಳವು ಮಾಡಿ ಹಲವು ಕಸಾಯಿಖಾನೆಗೆ ಸಾಗಾಟ ಮಾಡಿರುವುದಾಗಿ ವಿಚಾರಣೆ ವೇಳೆ ಬಂಧಿತರು ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಕಂಡು ಬಂದಿದ್ದು, ವಶಕ್ಕೆ ಪಡೆದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರೋ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಉಳಿದ ಗೋ ಕಳ್ಳರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
Kshetra Samachara
22/12/2021 07:56 pm