ಮಾಗಡಿ: ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನಿಸಿದ್ದಾರೆ.ಘಟನೆಯಲ್ಲಿ ಮೂವರು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಓರ್ವ ಬಾಲಕಿ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸದ್ಯ ಬದುಕಿ ಬಂದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಾಗಡಿ ತಾಲ್ಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇನ್ನೂ ತಾಯಿ ಸಿದ್ದಮ್ಮ(55), ಮಗಳು ಸುಮಿತ್ರಾ (30), ಅಳಿಯ ಹನುಮಂತರಾಜು (35) ಘಟನೆಯಲ್ಲಿ ಸಾವನ್ನಪ್ಪಿದ್ರೆ,ಹನ್ನೊಂದು ವರ್ಷದ ಮೊಮ್ಮಗಳು ಕೀರ್ತನಾ (11) ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಕೌಟುಂಬಿಕ ಕಲಹದಿಂದ ಮಾತಿಗೆ ಮಾತು ಬೆಳೆದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಒಟ್ಟು ಐದು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಕೆರೆ ಬಳಿ ಹೋಗಿದ್ದರು. ಮೃತ ಸುಮಿತ್ರಾಳ ಹತ್ತು ವರ್ಷದ ಮತ್ತೋರ್ವ ಮಗಳು ಚಂದನಾ ಬಂದು ಗ್ರಾಮಸ್ಥರಿಗೆ ತಿಳಿಸಿದ್ದಾಳೆ.
ಈ ವೇಳೆ ವಿಷಯ ತಿಳಿದ ಗ್ರಾಮಸ್ಥರು ಬಾಲಕಿ ಕೀರ್ತನಾಳನ್ನ ರಕ್ಷಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೆರೆಯಲ್ಲಿದ್ದ ಮೃತದೇಹಗಳನ್ನ ಹೊರತಗೆದಿದ್ದಾರೆ. ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಹನುಮಂತರಾಜು ಮನೆ ಅಳಿಯನಾಗಿ ಅತ್ತೆ ಮನೆಯಲ್ಲೆ ವಾಸವಿದ್ದ ಎನ್ನಲಾಗಿದೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/12/2021 01:13 pm