ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಡಿವೈಡರ್‌ಗೆ ಗುದ್ದಿದ್ದ ಬೈಕ್ ಸವಾರ ಸಾವು

ಬೆಂಗಳೂರು: ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಡಿವೈಡರ್‌ಗೆ ಗುದ್ದಿದ್ದ ಪರಿಣಾಮ ಬೈಕ್‌ನ ಹಿಂಬದಿ ಸವಾರ ಕೌಶಿಕ್ ಎಂಬಾತ ಮಾರಣಾತಿಕವಾಗಿ ಗಾಯಗೊಂಡಿದ್ದ ಕೌಶಿಕ್ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾನೆ.

ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿತ್ತು. ವಿಜಯನಗರ ಟ್ರಾಫಿಕ್ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಹಾಕದೇ ಬೈಕ್ ನಲ್ಲಿ ಬರ್ತಿದ್ದ ಯುವಕ ಕೌಶಿಕ್ ಹಾಗೂ ಆತನ ಸ್ನೇಹಿತ ಇದ್ದಕ್ಕಿದ್ದಂತೆ ಯು ಟರ್ನ್ ತೆಗೆದುಕೊಂಡಿದ್ದಾರೆ. ಆಗ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಆಗ ಹಿಂಬದಿ ಕುಳಿತಿದ್ದ ಕೌಶಿಕ್ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೌಶಿಕ್ ಇಂದು ಕೊನೆಯುಸಿರೆಳೆದಿದ್ದಾನೆ.

ಇನ್ನು ಘಟನೆಯಲ್ಲಿ ಪೊಲೀಸರದ್ದೇ ತಪ್ಪಿದೆ.ಅವರು ಬೈಕ್ ಬೆನ್ನಟ್ಟಿ ಹೋಗಿದ್ದಾರೆ. ಹೀಗಾಗಿ ಬೈಕ್ ಸ್ಕಿಡ್ ಆಗಿ ಬಿದ್ದು ತಮ್ಮ ಮಗನ ಸಾವು ಸಂಭವಿಸಿದೆ. ಇದಕ್ಕೆಲ್ಲ ಸ್ಥಳದಲ್ಲಿದ್ದ ಪೊಲೀಸರೇ ಹೊಣೆ ಎಂದು ಮೃತ ಕೌಶಿಕ್ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಬೆಂಗಳೂರು ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

12/12/2021 09:39 pm

Cinque Terre

1.05 K

Cinque Terre

0

ಸಂಬಂಧಿತ ಸುದ್ದಿ