ಬೆಂಗಳೂರು: ಹೌದು... ಈ ಘಟನೆ ನಡೆದದ್ದು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹೆಸರಘಟ್ಟ ರಸ್ತೆಯಲ್ಲಿರೋ ಎಂಇಐ ಬಡಾವಣೆಯಲ್ಲಿ. ಹೀಗೆ ಈ ಫೋಟೊದಲ್ಲಿ ಕಾಣ್ತಿರೋನ ಹೆಸ್ರು ಶಿವಕುಮಾರ, ತಮಿಳುನಾಡು ಮೂಲದವ.
8 ತಿಂಗಳ ಹಿಂದೆ ಈತ ಬಾಗಲಗುಂಟೆ ಬಳಿಯ ಎಂಇಐ ಲೇಔಟ್ ನಲ್ಲಿ ಆರ್.ಎಸ್. ಟ್ರಾವೆಲ್ಸ್ ಕಂಪನಿ ಆರಂಭಿಸಿದ್ದು ಬೆಂಗಳೂರು ನಗರ, ಹುಬ್ಬಳ್ಳಿ, ಚಿತ್ರದುರ್ಗ, ಹಾಸನ ಸಹಿತ ರಾಜ್ಯದ ಹಲವು ಕಡೆಯ ಅನೇಕ ಜನರಿಂದ ಇನೋವಾ, ಈಟಿಯಾಸ್, ಸ್ವಿಫ್ಟ್ ಡಿಜ಼ೈರ್ ಇತ್ಯಾದಿ ಕಾರುಗಳನ್ನು ಟ್ರಾವೆಲ್ಸ್ ನಲ್ಲಿ ಬಾಡಿಗೆಗೆ ಪಡೆದು ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ಬಾಡಿಗೆ ಹಣ ಹಾಕ್ತಿದ್ನಂತೆ.
ಇದ್ರಿಂದ ಈತನೊಂದಿಗೆ ವ್ಯವಹರಿಸಿದ ಹಲವು ವಾಹನ ಮಾಲೀಕರು ಈತನ ಮೇಲೆ ನಂಬಿಕೆ ಮೂಡಿದ್ರಿಂದ, ಇನ್ನೂ ಹೆಚ್ಚಿನ ಬಾಡಿಗೆ ಹಣದ ಆಸೆಗೆ ಬಿದ್ದು, ಕೆಲವರು ಲೋನ್ ಪಡೆದು ಬೇರೊಂದು ವಾಹನ ಖರೀದಿಸಿ, ಆ ಕಾರುಗಳನ್ನೆಲ್ಲ ಬಾಡಿಗೆಗೆ ಬಿಟ್ಟಿದ್ರೆ, ಇನ್ನೂ ಕೆಲವರು ತಮ್ಮ ಸ್ನೇಹಿತರು, ಪರಿಚಯಸ್ಥರು, ಸಂಬಂಧಿಕರಿಗೂ ಈತನನ್ನು ಪರಿಚಯಿಸಿ, ಅವರ ಕಾರುಗಳನ್ನು ಈ ಟ್ರಾವೆಲ್ಸ್ ನಲ್ಲಿಯೇ ಬಾಡಿಗೆಗೆ ಅಟ್ಯಾಚ್ ಮಾಡಿಸಿದ್ರು.
ಇನ್ನು, ಈ ತಿಂಗಳ ಬಾಡಿಗೆ ಹಣ ಹಾಕಬೇಕಿದ್ದ ದಿನಾಂಕ ಕಳೆದ್ರೂ, ಹಣ ಹಾಕಿರಲಿಲ್ಲ. ಇದ್ರಿಂದ ಶಿವಕುಮಾರ್ ಗೆ ಹಲವು ಬಾರಿ ಯಾರೇ ಕರೆ ಮಾಡಿದ್ರೂ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡ ವಾಹನ ಮಾಲೀಕರು ಟ್ರಾವೆಲ್ಸ್ ಕಚೇರಿಗೆ ಬಂದು ನೋಡಿದ್ರೆ ಬಾಗಿಲಿಗೆ ಬೀಗ ಹಾಕಿತ್ತು! 5-6 ದಿನ ಕಳೆದ್ರೂ ಬಾಗಿಲು ತೆರೆದಿಲ್ಲ, ಪೋನ್ ಮಾಡಿದ್ರೂ ಕರೆ ಸ್ವೀಕರಿಸಿಲ್ಲ. ಇದರಿಂದ ತಮಗೆ ಉಂಡೆ ನಾಮ ಹಾಕಿ ವಂಚಿಸಿರೋದು ಅರಿವಾಗಿದೆ.
ಹೀಗಾಗಿ 90ಕ್ಕೂ ಹೆಚ್ಚು ವಾಹನ ಮಾಲೀಕರು ಬಾಗಲಗುಂಟೆ ಠಾಣೆಯಲ್ಲಿ ಆರ್.ಎಸ್. ಟ್ರಾವೆಲ್ಸ್ ಮಾಲೀಕ ಶಿವಕುಮಾರ್ ನೊಂದಿಗಿದ್ದ ಸಿಬ್ಬಂದಿ ಚನ್ನರಾಯಪಟ್ಟಣದ ಕಾರೇಹಳ್ಳಿಯ ಕೃಷ್ಣೇಗೌಡ ಮತ್ತು ಶ್ರೀಕಾಂತ್ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ನ್ಯಾಯ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Kshetra Samachara
29/11/2021 07:28 pm