ವರದಿ: ಗಣೇಶ್ ಹೆಗಡೆ
ಬೆಂಗಳೂರು: ಅರ್ಕಾವತಿ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡಿಸುವುದಾಗಿ 1.70 ಕೋಟಿ ರೂ. ಲಂಚ ಪಡೆದು ಮೋಸ ಮಾಡಿರುವ ಆರೋಪದಲ್ಲಿ ಬಿಡಿಎ ಅಧಿಕಾರಿ ಸೇರಿ ಮೂವರ ವಿರುದ್ಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಯನಗರ 4 ಹಂತದ ಹೇಮಾ ಎಸ್.ರಾಜು ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಅನ್ವಯ ಬಿಡಿಎ ಉಪ ಆಯುಕ್ತ ಶಿವರಾಜ್, ಮಹೇಶ್ ಕುಮಾರ್ ಹಾಗೂ ಬಿಡಿಎ ಬ್ರೋಕರ್ ಎನ್ನಲಾದ ಮೋಹನ್ ಕುಮಾರ್ ವಿರುದ್ಧ ಎಫ್ ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಹೆಣ್ಣೂರು ಗ್ರಾಮದ ಸರ್ವೆ ನಂ 92/5, 93/1, 94 , 1.14 ಎಕರೆ ಹಾಗೂ ಶ್ರೀರಾಂಪುರ ಗ್ರಾಮದ ಸರ್ವೆ ನಂ 40/3 ರಲ್ಲಿ 1.20 ಎಕರೆ ಜಮೀನು ಒಟ್ಟು 2.34 ಎಕರೆ ಜಮೀನನ್ನು ಬಿಡಿಎ 2013 ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿತ್ತು.
ಈ ಸಂಬಂಧ ಪರಿಹಾರ ಪಡೆಯಲು ಬಿಡಿಎ ತೆರಳಿದಾಗ ಅಧಿಕಾರಿ ಮೋಹನ್, ಶಿವರಾಜ್ ದೂರುದಾರರಾದ ಹೇಮಾ ಅವರಿಗೆ ಪರಿಚಯ ಆಗಿದ್ದರು ಎನ್ನಲಾಗಿದೆ. ಬಳಿಕ ಪರಿಹಾರ ಕೊಡಿಸುವುದಾಗಿ ವಂಚಿಸಿ 1.70 ಕೋಟಿ ವರೆಗೂ ಹಣ ಲಂಚ ಪಡೆದಿದ್ದಾರೆಂದು ದೂರಿನಲ್ಲಿ ಈ ಬಗ್ಗೆ ಹೇಮಾ ವಿವರಿಸಿದ್ದಾರೆ.
Kshetra Samachara
17/11/2021 08:41 am