ವರದಿ: ಮಲ್ಲಿಕ್ ಜಾನ್ ನದಾಫ್
ಬೆಂಗಳೂರು: ನಕಲಿ ನಕಲಿ ಎಲ್ಲವೂ ನಕಲಿ. ಮನೆಗೆ ಬಳಸುವ ಸೋಪಿನ ಪುಡಿನೂ ಈಗ ನಕಲಿ. ಹೌದು.
ಬೆಂಗಳೂರಿನ್ಲಲಿ ನಕಲಿ ಸರ್ಫ್ ಎಕ್ಸಲ್ ತಯಾರಿಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿ ನಾಲ್ವರು ಆರೋಪಿಗಳ ಬಂಧಿಸಿದೆ.
ದಾಳಿ ವೇಳೆ ಬಂಧಿತರಿಂದ 13,080 ಸರ್ಫ್ ಎಕ್ಸಲ್ ಪ್ಯಾಕ್ ಹಾಗೂ ಪೌಡರ್ ತಯಾರಿಕೆಗೆ ಬಳಸುತ್ತಿದ್ದ ಮಷೀನ್ ಜಫ್ತಿಅನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತರನ್ನ ಉತ್ತಮ ಸಿಂಗ್, ತನ್ ಸಿಂಗ್, ಮೋದರಾಮ್ ಹಾಗೂ ಜಲಂ ಸಿಂಗ್ ರಾಥೋಡ್ ಎಂದು ಗುರುತಿಸಲಾಗಿದೆ.
ಹನುಮಂತನಗರ ವ್ಯಾಪ್ತಿಯ ಮನೆಯೊಂದರಲ್ಲಿ ಈ ಬಂಧಿತರು ನಕಲಿ ಪೌಡರ್ ತಯಾರಿಸುತ್ತಿದ್ದರು.
Kshetra Samachara
11/11/2021 03:26 pm