ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು :ದೇವಸ್ಥಾನಕ್ಕೆ ಬೀಗ ಹಾಕಿದ್ದ ಆರ್ಚಕ ಬಿಚ್ಚಿಟ್ಟ ಸತ್ಯ ಏನ್ ಗೊತ್ತೇ ?

ದೊಡ್ಡಬಳ್ಳಾಪುರ: ಬಯಲು ಬಸವಣ್ಣ ದೇವಸ್ಥಾನಕ್ಕೆ ಬಾಗಿಲು ಹಾಕಿದ ಆರ್ಚಕ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾತನಾಡಿದ ಆರ್ಚಕ ಹೆಚ್.ಎನ್. ಕೃಷ್ಣಮೂರ್ತಿ ಟ್ರಸ್ಟ್ ಆರೋಪಗಳನ್ನ ನಿರಕರಿಸಿದ್ದಾರೆ.

ನಗರದ ಕರೇನಹಳ್ಳಿಯ ಬಯಲು ಬಸವಣ್ಣ ದೇವಸ್ಥಾನಕ್ಕೆ ಆರ್ಚಕರಾದ ಹೆಚ್.ಎನ್. ಕೃಷ್ಣಮೂರ್ತಿ ಬಾಗಿಲು ಹಾಕಿದ ಘಟನೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟ್ರಸ್ಟ್ ಮತ್ತು ನನ್ನ ನಡುವೆ ವೈಮನಸ್ಸು ಇದ್ದ ಕಾರಣಕ್ಕೆ ದೇವಸ್ಥಾನದ ಕೀಗಳನ್ನ ತಹಶೀಲ್ದಾರ್ ಕಚೇರಿಗೆ ನೀಡುವಂತೆ ತಹಶೀಲ್ದಾರ್ ಆದೇಶ ನೀಡಿದ್ದರು.ಅವರ ಆದೇಶದಂತೆ ನಾನು ಕೀಗಳನ್ನ ತಹಶೀಲ್ದಾರ್ ಕಚೇರಿಗೆ ನೀಡಿದ್ದೆ. ಆದರೆ ಟ್ರಸ್ಟ್ ನವರೇ ದೇವಸ್ಥಾನಕ್ಕೆ ಬೀಗ ಹಾಕಿ ನನ್ನ ಮೇಲೆ ಆಪಾದನೆ ಮಾಡಿದ್ದಾರೆ.

ದೇವಸ್ಥಾನದ ಗರ್ಭ ಗುಡಿಗೆ ಬೆಕ್ಕುಗಳು ನುಗ್ಗಿ ಗಲೀಜು ಮಾಡುತ್ತಿದ್ದವು. ಈ ಕಾರಣದಿಂದ ದೇವಸ್ಥಾನದ ಬಾಗಿಲುಗಳಿಗೆ ಶೀಟ್ ಅಳವಡಸಿದ್ದೆ ಮತ್ತು ಹುಂಡಿ ಹಣ ಎಣಿಕೆ ಮಾಡುವ ದಿನ ಮುಜರಾಯಿ ಇಲಾಖೆಯ ಹೇಮಂತ್‌ ಗೆ ತಿಳಿಸಿದೆ. ಆದರೆ ಹೇಮಂತ್ ಟ್ರಸ್ಟ್ ನವರಿಗೆ ತಿಳಿಸಿಲ್ಲ. ಟ್ರಸ್ಟ್ ನವರು ವಿನಾಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ. 16 ವರ್ಷಗಳಿಂದ ದೇವರ ಸೇವೆ ಮಾಡುತ್ತಿರುವೆ. ಈಗ ಆರ್ಚಕ ಕೆಲಸದಿಂದ ವಜಾ ಮಾಡಿರುವುದು ನನ್ನ ಮನಸಿಗೆ ಆಘಾತ ತಂದಿದೆ ಎಂದು ಗದ್ಗದಿತರಾದರು.

Edited By : Nagesh Gaonkar
Kshetra Samachara

Kshetra Samachara

26/02/2022 07:58 pm

Cinque Terre

4.46 K

Cinque Terre

0

ಸಂಬಂಧಿತ ಸುದ್ದಿ