ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನರೇಗಾ ಗೋಲ್‌ ಮಾಲ್ ಶಾಸಕರಿಗೆ ಹೇಳಿದ ಗುಮಾನಿ; ದಲಿತ ಕುಟುಂಬದ ಮೇಲೆ ಹಲ್ಲೆ, ಮಹಿಳೆ ಸಾವು

ʼನರೇಗಾʼದಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ ಶಾಸಕರಿಗೆ ಹೇಳಿದ್ದಾರೆಂಬ ಗುಮಾನಿಯಿಂದ ಕೆರಳಿದ ಸವರ್ಣೀಯ ಕುಟುಂಬದವರು ದಲಿತ ಕುಟುಂಬದ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಹಲ್ಲೆಯಲ್ಲಿ ಗೌರಮ್ಮ ಎಂಬವರು ಸಾವನ್ನಪ್ಪಿದ್ದಾರೆ. ಅವರ ಮಗ ಗಾಯಗೊಂಡಿದ್ದಾರೆ.

ಸುಧಾಕರ್ ಕುಟುಂಬ ನರೇಗಾದಡಿ ಬದು ನಿರ್ಮಾಣ ಮಾಡಿಸಿತ್ತು. ನರೇಗಾ ಯೋಜನೆಗೆ ಮಾನವ ಸಂಪನ್ಮೂಲ ಬಳಸದೆ ಯಂತ್ರ ಮೂಲಕ ಮಾಡಿಸಿದ್ದು, ಈ ಬಗ್ಗೆ ಮೃತ ಮಹಿಳೆ ಗೌರಮ್ಮ ಅವರ ಮಗ ನಾಗರಾಜ್, ಶಾಸಕರಿಗೆ ಹೇಳಿದ್ದಾರೆಂಬ ಗುಮಾನಿ ಸುಧಾಕರ್ ಕುಟುಂಬಕ್ಕೆ ಇತ್ತು.

ನಿನ್ನೆ ರಾತ್ರಿ 7ರ ಸಮಯ ಸುಧಾಕರ್, ಹನುಮಂತ ರಾಯಪ್ಪ, ಮಾರುತಿ, ಚಿನ್ನಕ್ಕ ಎಂಬವರು ಗೌರಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸುಧಾಕರ್, ಗೌರಮ್ಮರಿಗೆ ಕಾಲಿನಿಂದ ಒದ್ದಿದ್ದಾನೆ. ಈ ಹೊಡೆತಕ್ಕೆ ಗೌರಮ್ಮ ಸ್ಥಳದಲ್ಲೇ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತದೇಹವನ್ನು ಶವಾಗಾರದಲ್ಲಿ ಇರಿಸಿದ್ದು, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಡಿವೈಎಸ್ಪಿ ನಾಗರಾಜು, ಇನ್ ಸ್ಪೆಕ್ಟರ್ ಸತೀಶ್ ಭೇಟಿ‌ ನೀಡಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

25/06/2022 05:49 pm

Cinque Terre

38.78 K

Cinque Terre

1

ಸಂಬಂಧಿತ ಸುದ್ದಿ