ಸಹೋದರರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ತಡರಾತ್ರಿ ಗೋವಿಂದಪುರ ಠಾಣಾ ವ್ಯಾಪ್ತಿಯ ಪ್ರಶಾಂತ ನಗರದಲ್ಲಿ ನಡೆದಿದೆ. 37 ವರ್ಷದ ಕಪಿಲನ್ ಸಹೋದರನಿಂದಲೇ ಕೊಲೆಯಾದ ದುರ್ದೈವಿ.
ಮನೆಯ ವಿಚಾರವಾಗಿ ಕಪಿಲನ್ ಹಾಗೂ ಆತನ ಅಣ್ಣ ಅಶೋಕನ್ ನಡುವೆ ಆಗಾಗ ಜಗಳ ಆಗ್ತಿತ್ತು. ತಡರಾತ್ರಿ ಸಹ ಕುಡಿದ ಅಮಲಿನಲ್ಲಿ ಜಗಳವಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಪಿಲನ್ ಮೇಲೆ ಹಲ್ಲೆ ಮಾಡಿರುವ ಅಶೋಕನ್ ಆತನನ್ನ ತಳ್ಳಿ ಕೆಳಕ್ಕೆ ಬೀಳಿಸಿದ್ದಾನೆ. ತಕ್ಷಣ ಕುಟುಂಬಸ್ಥರು ಕಪಿಲನ್ ನನ್ನ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಜೋರಾಗಿ ಬಿದ್ದ ಪರಿಣಾಮ ದೇಹದೊಳಗೆ ರಕ್ತಸ್ರಾವ ಉಂಟಾಗಿ ಕಪಿಲನ್ ಮೃತಪಟ್ಟಿದ್ದಾನೆ.
ಕಪಿಲನ್ ಪತ್ನಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದಪುರ ಠಾಣಾ ಪೊಲೀಸರು ಆರೋಪಿ ಅಶೋಕನ್ ನನ್ನ ಬಂಧಿಸಿದ್ದಾರೆ.
PublicNext
08/06/2022 04:40 pm