ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಅಕ್ರಮ ಪ್ರಕರಣ ತನಿಖಾ ಹಂತದಲ್ಲಿ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಇಗಾಗಲೇ ಪ್ರಕರಣ ಸಬಂಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳು ನಡೆಸಿದ್ದ ಗುಪ್ತ ಸಭೆ ಬಗ್ಗೆ ಉಲ್ಲೇಖವಾಗಿದೆ. ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ನೇತೃತ್ವದಲ್ಲಿ ಸಹೋದ್ಯೋಗಿಗಳ ಜೊತೆ ನಡೆದ ಸಭೆಯಲ್ಲಿ ವಿ ಆರ್ ಸೇಫ್ ಎಂದೇ ಭಾವಿಸಿ ಮೀಟಿಂಗ್ ಮಾಡಿದ್ರಂತೆ.
ಕಲಬುರಗಿಯಲ್ಲಿ ಪಿಎಸ್ಐ ಪರೀಕ್ಷಾ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆತಂಕದಿಂದಲೇ ಬೆಂಗಳೂರಿನಲ್ಲಿ ಎಡಿಜಿಪಿ ಅಮೃತ್ ಪಾಲ್ ನೇತೃತ್ವದಲ್ಲಿ ನೇಮಕಾತಿ ವಿಭಾಗದಲ್ಲೇ ಕೆಲಸ ಮಾಡುತ್ತಿದ್ದ ಡಿಎಸ್‌ಪಿ ಶಾಂತಕುಮಾರ್ ಸಿಬ್ಬಂದಿಯಾದ ಶ್ರೀಧರ್, ಶ್ರೀನಿವಾಸ್ ಮತ್ತು ಹರ್ಷ ಸಭೆ ನಡೆಸಿದ್ದರು. ಪರೀಕ್ಷಾ ಅಕ್ರಮ ಕಲಬುರಗಿಯಲ್ಲಿ ನಡೆದಿದ್ದು ಇದಕ್ಕೂ ಬೆಂಗಳೂರಿಗೂ ಏನು ಸಂಬಂಧವಿಲ್ಲ. ಹೀಗಾಗಿ ನಾವೆಲ್ಲಾ ಸೇಫ್ ಅಗಿದ್ದೇವೆ. ಅಲ್ಲದೇ ಮುಂದೆಯು ಸೇಫ್ ಆಗಿಯೇ ಇರುತ್ತೇವೆ ಎಂದು ಭಾವಿಸಿಕೊಂಡಿದ್ದರಂತೆ.
ಅಕ್ರಮ ಹೊರಬಂದ ನಂತರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಾರ್ತನ್ ರೇಂಜ್ ಐಜಿ ಹಾಗು ಕಲಬುರಗಿ ಎಸ್ ಪಿ ವಿರುದ್ದ ಅಮ್ರಿತ್ ಪಾಲ್ ಗರಂ ಆಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು ಐಜಿ ಹಾಗು ಎಸ್ಪಿ ಕೆಲಸ. ನಾನು ಬೆಂಗಳೂರಿನಿಂದ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಪರೀಕ್ಷಾ ಅಕ್ರಮದಲ್ಲಿ ಬ್ಲೂಟೂತ್ ಬಳಕೆ ಆಗಿರುವ ಬಗ್ಗೆ ತನಿಖೆ ಮಾಡಿ ತನಿಖೆ ನಡೆಸುವಂತೆ ಸೂಚಿಸಿದ್ದರು ಎನ್ನಲಾಗಿದೆ.
PublicNext
01/09/2022 07:16 pm