ಬೆಂಗಳೂರು: ಬೆಂಗಳೂರು ಪೂರ್ವದ ಕೃಷ್ಣರಾಜಪುರ ವ್ಯಾಪ್ತಿಯ ಆವಲಹಳ್ಳಿ ಸಮೀಪದ ಶಾಲೆಗೆ ಹೋಗುತ್ತಿದ್ದ ವ್ಯಾನ್ ಅಡ್ಡಹಾಕಿ ಬಾಲಕನನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮನೆ ಕೆಲಸಗಾರ ಶಕ್ತಿವೇಲು ಹಾಗೂ ಆತನ ಸ್ನೇಹಿತೆ ಸುನೀತಾ ಎಂದು ಗುರುತಿಸಲಾಗಿದೆ. ಆರೋಪಿ ಶಕ್ತಿವೇಲು ದೂರುದಾರರ ಮನೆಯಲ್ಲಿ ಕಳೆದ ಹತ್ತು ದಿನಗಳಿಂದ ಕೆಲಸ ಮಾಡುತ್ತಿದ್ದ. ಮಗುವನ್ನು ಸ್ಕೂಲ್ ಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ. ಈ ವೇಳೆ ತನ್ನ ಮಾಲೀಕನ ಬಳಿ ಕೋಟ್ಯಾಂತರ ಹಣ ಇದೆ ಅಂತ ತಿಳಿದು ಸ್ನೇಹಿತೆ ಸುನೀತಾ ಜೊತೆಗೆ ಸೇರಿ ಪ್ಲಾನ್ ಮಾಡಿ ಮಗುವನ್ನು ಅಪಹರಿಸಿದ್ದ. ಬಳಿಕ ಐದು ಲಕ್ಷ ರೂ. ನೀಡುವಂತೆ ಬಾಲಕ ಪೋಷಕರಿಗೆ ಬೇಡಿಕೆ ಇಟ್ಟಿದ್ದ.
ಈ ಸಂಬಂಧ ಬಾಲಕನ ಪೋಷಕರು ಕೃಷ್ಣರಾಜಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕನಿದ್ದ ಕ್ಯಾಬ್ ಚಾಲಕನನ್ನು ವಿಚಾರಿಸಿದಾಗ ಶಕ್ತಿವೇಲು ಕೃತ್ಯ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
03/07/2022 11:01 am