ಬೆಂಗಳೂರು: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಎರಡು ದಿನದ ಹಿಂದೆ (ಸೋಮವಾರ) ಸಿಟಿ ರೌಂಡ್ಸ್‌ನಲ್ಲಿದ್ದಾಗ ಹೈ ಎಂಡ್ ಕಾರ್ ನಂಬರ್ ಪ್ಲೇಟ್ ನೋಡಿ ಶಾಕ್ ಆಗಿದ್ದಾರೆ.
ಹೌದು! ಆಯುಕ್ತರು ನಗರ ಪ್ರದಕ್ಷಿಣೆ ಸಮಯದಲ್ಲಿ ಹೈ ಎಂಡ್ ಕಾರೊಂದು ಓವರ್ ಸ್ಪೀಡ್‌ನಲ್ಲಿ ಹೋಗಿದ್ದು, ಕೂಡಲೇ ಕಾರನ್ನು ಫಾಲೋ ಮಾಡಿ ನಂಬರ್ ಪ್ಲೇಟ್ ಫೋಟೋವನ್ನು ತೆಗೆದಿದ್ದಾರೆ. ಕೆಎ 03 ಎಂಸಿ 7007 ನಂಬರ್‌ನಲ್ಲಿದ್ದ ಹೈ ಎಂಡ್ ಕಾರ್ ನಂಬರ್ ಪ್ಲೇಟ್ ಫೋಟೊವನ್ನ ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತರಿಗೆ ಪ್ರತಾಪ್ ರೆಡ್ಡಿ ಕಳುಹಿಸಿದ್ದು, ತನಿಖೆಗೆ ಆದೇಶಿಸಿದ್ದರು. ಈ ವೇಳೆ ಹೈ ಎಂಡ್ ಕಾರ್‌ಗೆ ಲೋಕಲ್ ನಂಬರ್‌ನ್ನ ಅಳವಡಿಸಿಕೊಳ್ಳಲಾಗಿತ್ತು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪ್ರತಾಪ್ ರೆಡ್ಡಿ ಶಾಕ್ ಆಗಿದ್ದಾರೆ. ಈ ವೇಳೆ ಬಿಎಂಡಬ್ಲ್ಯೂ ಕಾರ್‌ಗೆ ಓಮಿನಿ ಕಾರ್ ನಕಲಿ ನಂಬರ್ ಹಾಕಿರೋದು ಪತ್ತೆಯಾಗಿದ್ದು, ಸದ್ಯ ಬಿಎಂಡಬ್ಲ್ಯೂ ಕಾರು ಮಾಲೀಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಸದ್ಯ ಎರಡು ಕಾರಿನ ಫೋಟೋವನ್ನು ಸಂಚಾರ ಪೊಲೀಸರು ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಾರಿನ ಮಾಹಿತಿ ಕೇಳಿದ್ದಾರೆ.
PublicNext
29/06/2022 04:50 pm