ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸರಗಳ್ಳತನ, ರಾಬರಿಯಂತ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ನಗರ ಪೊಲೀಸರು ಬೇಸಿಕ್ ಪೊಲೀಸಿಂಗ್ ಮೊರೆ ಹೋಗಿದ್ದಾರೆ. ನಗರದ ಗಡಿಭಾಗ ಮತ್ತು ನಿರ್ಜನ ಪ್ರದೇಶದಲ್ಲಿ ಸರಗಳ್ಳತ, ರಾಬರಿ ಪ್ರಕರಣ ಹೆಚ್ಚಾಗಿದ್ದು ಇದ್ರಿಂದ ಅಲರ್ಟ್ ಆಗಿರೋ ಪೊಲೀಸರು ಚೆಕ್ ಪಾಯಿಂಟ್ ನಿರ್ಮಾಣ ಮಾಡಿ ವೆಹಿಕಲ್ ಚೆಕ್ ಮಾಡ್ತಿದ್ದಾರೆ.
ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ವಾಹನಗಳ ದಾಖಲೆಗಳ ಪರಿಶೀಲನೆಯನ್ನ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ರು ನಡೆಸ್ತಿದ್ದಾರೆ. ಇನ್ನೂ ಇದ್ರ ಜೊತೆಗೆ ಮುಖ್ಯವಾಗಿ ಕ್ರೈಂ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಬಿತ್ತಿಪತ್ರಗಳನ್ನು ನೀಡಿ ಖಾಕಿ ಪಡೆ ಅರಿವು ಮೂಡಿಸುತ್ತಿದೆ. ಕ್ರೈಂ ನಡೆಯದಂತೆ ಏನೆಲ್ಲ ಎಚ್ಚರಿಕೆ ವಹಿಸಬೇಕು? ನಡೆಯುವಾಗ ಯಾವ ರೀತಿ ಎಚ್ಚರಿಕೆಯಿಂದ ಇರಬೇಕು ಎಂದು ಜನರಿಗೆ ಪಾರ್ಕ್ ಮತ್ತು ರಸ್ತೆಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.
Kshetra Samachara
24/06/2022 09:48 pm