ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲೈಟರ್ ವಿಚಾರಕ್ಕೆ ಕಿರಿಕ್- ಲಾಂಗ್ ಬೀಸಿ ಶೋ ಕೊಟ್ಟ ಪುಡಿ ರೌಡಿ

ಬೆಂಗಳೂರು: ಲೈಟರ್ ವಾಪಸ್ ಕೊಡಲಿಲ್ಲ ಅಂದಿದ್ದಕ್ಕೆ ಪುಡಿ ರೌಡಿಯೊಬ್ಬ ಲಾಂಗ್ ಝಳಪಿಸಿ ಬೆದರಿಸಿರುವ ಘಟನೆ ಜೂನ್ 5ರಂದು ರಾತ್ರಿ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟಿನಲ್ಲಿ ಘನಟನೆ ನಡೆದಿದ್ದು ಬಾರ್‌ನಲ್ಲಿ ಕುಳಿತು ಕುಡಿಯುತ್ತಿದ್ದ ಇಬ್ಬರು ಅಪರಿಚಿತ ಗ್ರಾಹಕರ ನಡುವೆ ಸಿಗರೇಟ್ ಹೊತ್ತಿಸಲು ಲೈಟರ್ ಪಡೆದಿದ್ದರು. ಆದರೆ ಲೈಟರ್ ಪಡೆದಿದ್ದವನು ಎಣ್ಣೆ ನಶೆಯಲ್ಲಿ ಲೈಟರ್ ವಾಪಸ್ ಕೊಡಲ್ಲ ಎಂದಿದ್ದ. ಈ ವೇಳೆ ಇಬ್ಬರ ನಡುವೆ ಬಾರಿನಲ್ಲಿ ಕಿರಿಕ್ ಶುರುವಾಗಿದೆ. ಗಲಾಟೆಯಾಗುತ್ತಿರುವುದನ್ನ ಗಮನಿಸಿದ ಅಕ್ಕಪಕ್ಕದ ಅಂಗಡಿಯವರು ಲೈಟರ್ ವಿಚಾರಕ್ಕೆ ಯಾಕೆ ಗಲಾಟೆ ಮಾಡಿಕೊಳ್ತಿದ್ದೀರಿ ಅಂತ ಬೈದು ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಆದರೆ ಸ್ವಲ್ಪ ಸಮಯದಲ್ಲೇ ಮಾರಕಾಸ್ತ್ರದ ಸಮೇತ ವಾಪಸ್ಸಾಗಿದ್ದ ಲೈಟರ್ ಕೊಟ್ಟಿದ್ದ ಆಸಾಮಿ ಬಾರ್ ಒಳಗೆ ನುಗ್ಗಿ‌ ಲೈಟರ್ ಕೊಡಲ್ಲ ಅಂದವನ ಮೇಲೆ ಲಾಂಗ್ ಬೀಸಿದ್ದಾನೆ. ಪರಿಣಾಮ ಓರ್ವನ ತಲೆಗೆ ಗಾಯವಾಗಿ ಆಸ್ಪತ್ರೆ ಸೇರಿದ್ರೆ, ಇಬ್ಬರೂ ಅಪರಿಚಿತ ಗ್ರಾಹಕರ ನಡುವಿನ ಕಿರಿಕ್ಕಿಗೆ ಬಾರ್ ಸಿಬ್ಬಂದಿ ಹೈರಾಣಾಗಿದ್ದು, ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Edited By :
PublicNext

PublicNext

15/06/2022 06:00 pm

Cinque Terre

34.92 K

Cinque Terre

0

ಸಂಬಂಧಿತ ಸುದ್ದಿ