ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೈಟಿ ಧರಿಸಿ ಫೈನಾನ್ಸ್ ಕಂಪನಿಗೆ ಕನ್ನ ಹಾಕಲು ಯತ್ನ: ಮೂವರು ಆರೋಪಿಗಳ ಬಂಧನ

ಬೆಂಗಳೂರು: ಮಣಪ್ಪುರಂ ಫೈನಾನ್ಸ್ ಕಂಪನಿಗೆ ಕನ್ನ ಹಾಕಲು ಯತ್ನಿಸಿದ್ದ ಮೂವರು ಆರೋಪಿಗಳನ್ನ ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ನಾಗರಾಜ್, ನೇಪಾಳ ಮೂಲದ ಬಾಬು ರಾಜಾ ಸಿಂಗ್ ಹಾಗೂ ತುಮಕೂರು ಮೂಲದ ಕುಮಾರ್ ಬಂಧಿತರು.

ಖಾಸಗಿ ಬಸ್ ಚಾಲಕನಾಗಿದ್ದ ನಾಗರಾಜ್ ಹಾಗೂ ಆಟೋ ಚಾಲಕನಾಗಿದ್ದ ಕುಮಾರ್ ಸಾಲದ ಸುಳಿಯಿಂದ ಹೊರಬರಲು ಕಳ್ಳತನಕ್ಕೆ ಸ್ಕೆಚ್ ಹಾಕಿದ್ರು. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಮೋಜಿನ ಜೀವನಕ್ಕೆ ದಾಸನಾಗಿದ್ದ ಬಾಬು ರಾಜಾ ಸಿಂಗ್ ನ ಈ ಕೃತ್ಯಕ್ಕೆ ನಾಗರಾಜ್ ಬಳಸಿಕೊಂಡಿದ್ದ.

ಮೇ 26ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನೈಟಿ ಧರಿಸಿ ರಾಜಗೋಪಾಲನಗರದ ಮಣಪ್ಪುರಂ ಫೈನಾನ್ಸ್ ಶಾಖೆಗೆ ನುಗ್ಗಿದ್ದ ಆರೋಪಿಗಳು ಗ್ಯಾಸ್ ಕಟರ್ ಬಳಸಿ ರೋಲಿಂಗ್ ಶಟರ್ ಕತ್ತರಿಸಿದ್ರು.. ಬಳಿಕ ಸಿಸಿ ಕ್ಯಾಮೆರಾ ಆಫ್ ಮಾಡಿ ಲಾಕರ್ ಕತ್ತರಿಸುವ ಯತ್ನದಲ್ಲಿದ್ದಾಗ ಸೆಕ್ಯುರಿಟಿ ಸೈರನ್ ಕೂಗಿದ್ರಿಂದ ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ರು. ಫೈನಾನ್ಸ್ ಕಂಪನಿಯವರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ರಾಜಗೋಪಾಲನಗರ ಇನ್ಸ್ ಪೆಕ್ಟರ್ ಜಗದೀಶ್ ಅಂಡ್ ಟೀಂ ಆರೋಪಿಗಳನ್ನ ಬಂಧಿಸಿದೆ. ಬಂಧಿತರ ವಿರುದ್ಧ ಈ ಹಿಂದೆ ಸಹ ಎಟಿಎಂ ಮೆಷಿನ್ ಕಳ್ಳತನ ಯತ್ನದ ಪ್ರಕರಣ ದಾಖಲಾಗಿತ್ತು.

Edited By : Somashekar
Kshetra Samachara

Kshetra Samachara

02/06/2022 07:55 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ