ಬೆಂಗಳೂರು: ಓಜಿಕುಪ್ಪಂ ಗ್ಯಾಂಗ್ ಅನ್ನೋ ಈ ಹೆಸ್ರು ಕೇಳಿದ್ರೆ ಬೆಂಗಳೂರು ಜನ ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಬ್ಯಾಂಕ್ ಮುಂದೆ, ಸಬ್ ರಿಜಿಸ್ಟರ್ ಕಚೇರಿ ಮುಂದೆ ವಾಚ್ ಮಾಡೋ ಇವ್ರು, ಹತ್ತು ಇಪ್ಪತ್ತು ನೋಟ್ ಕೆಳಗೆ ಹಾಕಿ ಗಮನ ಬೇರೆಡೆ ಸೆಳೆದು, ಲಕ್ಷ ಲಕ್ಷ ದೋಚುವ ದೊಡ್ಡ ಗ್ಯಾಂಗ್ ಇದಾಗಿತ್ತು. ಅದೇ ರೀತಿಯ ಒಂದು ಗ್ಯಾಂಗ್ ಈಗ ಸದ್ಯ ನಗರದಲ್ಲಿ ಆಕ್ಟೀವ್ ಆಗಿದೆ.ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರವಿಕುಮಾರ್ ಅಂಡ್ ತಂಡ ಆ ಗ್ಯಾಂಗ್ ನ ಸದಸ್ಯರನ್ನ ಈಗ ಬಂಧಿಸಿದ್ದಾರೆ.
ಈ ವಿಡಿಯೋದಲ್ಲಿ ಇರೋರ ಹೆಸ್ರು ಪ್ರದೀಪ್@ಕಾರ್ತಿಕ್ ಅಂಡ್ ಗೋಪಿ. ಮೂಲತಃ ಓಜಿಕುಪ್ಪಂ ಗ್ಯಾಂಗ್‌ನ ಇವ್ರ ವಾಸ ಆಗಿರೋದು ಚೆನ್ನೆನಲ್ಲಿಯೇ. ಬ್ಯಾಂಕ್ ಗಳನ್ನೇ ಟಾರ್ಗೇಟ್ ಮಾಡಿಕೊಂಡಿದ್ದ ಇವ್ರು. ಬ್ರಾಂಡೆಂಡ್ ಬಟ್ಟೆಗಳನ್ನ ಹಾಕೊಂಡು ಅಫಿಶೀಯಲ್ಸ್ ರೀತಿ ಬಿಲ್ಡಪ್ ಕೊಡ್ತಿದ್ರು. ನಾಲ್ಕು ಜನರ ಈ ತಂಡ ಹಣ ಡ್ರಾ ಮಾಡೋರನ್ನ ನಿಗಾ ಮಾಡಿ ಅವ್ರನ್ನ ಫಾಲೋ ಮಾಡ್ತಿದ್ರು ಮೈಮೇಲೆ ಸಗಣಿ ಹಾಕೋದು ಅವ್ರಿಗೆ ಗಲೀಜು ಬಿದ್ದಿದೆ ಅಂತ ಹೇಳಿ ಕೆಳಗಿಳಿಸಿ ಅಪರೇಷನ್ ಮಾಡ್ತಿದ್ರರು.ಇನ್ನೂ ಯಾರಾದ್ರೂ ಕಾರಿನಲ್ಲಿ ಬಂದ್ರೆ ಅವ್ರ ಕಾರನ್ನ ಮೊದಲೇ ಪಂಚರ್ ಮಾಡಿ, ಫಾಲೋ ಮಾಡಿ ಸಾರ್ ನಿಮ್ ಕಾರು ಕಳ್ಳತನ ಆಗಿದೆ ಅಂತಿದ್ರು. ಅವ್ರು ಬಂದು ಟೈಯರ್ ನೋಡೋ ಅಷ್ಟರಲ್ಲೇ ಕಾರಿನಲ್ಲಿರೋ ಹಣ ಎಗರಿಸಿ ಪರಾರಿಯಾಗ್ತಿದ್ರು.
ಇನ್ನೂ ಈ ಕಳ್ಳರು ಅಫೆನ್ಸ್ ಮಾಡ್ತಿದ್ದು ಸೋಮವಾರ,ಶುಕ್ರವಾರ ಮಾತ್ರ. ಯಾಕಂದ್ರೆ ಜನ ಒಳ್ಳೆ ಕೆಲಸಕ್ಕೆ ಹಣ ಡ್ರಾ ಮಾಡೋದು ಇದೇ ವಾರ. ಈ ಕಾರಣಕ್ಕೆ ಇದೇ ವಾರಗಳನ್ನ ಆರೋಪಿಗಳು ಆಯ್ಕೆ ಮಾಡಿಕೊಳ್ತಿದ್ರು. ಇನ್ನೂ
ಸಿಟಿಗೆ ಬರ್ತಿದ್ದ ಆರೋಪಿಗಳು ಅಪರೇಷನ್ ಸಕ್ಸಸ್ ಆಗೋವರೆಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟೆಂಪರವರಿ ಮನೆ ಕೂಡ ಮಾಡಿದ್ರು. ಡೈಲಿ ಫ್ರೆಶ್ ಆಗೋಕೆ ಮನೆ ಮಾಡ್ತಿದ್ದ ಇವ್ರೂ, ಕೆಲಸ ಸಕ್ಸಸ್ ಆದ್ರೆ ಸೀದಾ ಚೆನ್ನೈ ಗೆ ಹೋಗ್ತಿದ್ರು. ಬಂದ ಹಣವನ್ನ ಇಕ್ವಲ್ ಶೇರ್ ಮಾಡ್ಕೊಂಡು ಬಾಂಬೆ ರೆಡ್ ಲೈಟ್ ಏರಿಯಾ ಮತ್ತು ಗೋವಾ ಕೆಸಿನೋದಲ್ಲಿ ಮಜಾ ಮಾಡಿ, ದುಡ್ಡು ಖಾಲಿ ಆದ್ಮೇಲೆ ಮತ್ತೆ ಕೃತ್ಯಕ್ಕೆ ಕೈ ಹಾಕ್ತಿದ್ರು.
ಇನ್ನು ಇವರನ್ನ ಹಿಡಿಯೋಕೆ ಬ್ಯಾಡರಹಳ್ಳಿ ಪೊಲೀಸ್ರು ಸುಮಾರು 500 ಸಿಸಿಟಿವಿ ಚೆಕ್ ಮಾಡಿ ಎಲೆಕ್ಟ್ರಾನಿಕ್ ಸಿಟಿ ಸೇರಿದ್ರು. ಆರೋಪಿಗಳನ್ನ ಸಾಕ್ಷಿ ಸಮೇತ ಪತ್ತೆ ಮಾಡಲು ಆರೋಪಿಗಳಿದ್ದ ಮನೆಯಲ್ಲೇ ಎರಡು ತಿಂಗಳು ಕ್ರೈಂ ಸ್ಟಾಫ್ ಗಳಾದ ಗುರುದೇವ್, ತೀರ್ಥಪ್ರಸಾದ್ ,ಪ್ರಸನ್ನ ಮತ್ತು ನವೀನ್ ಬಾಡಿಗೆ ಮನೆಯಲ್ಲಿ ವಾಸ ಮಾಡಿ, ಇಬ್ಬರು ಆರೋಪಿಗಳನ್ನ ಬಂಧಿಸಿ 5.65 ಲಕ್ಷ ನಗದು, ಎರಡು ಬೈಕ್ ಸೀಜ್ ಮಾಡಿದ್ದಾರೆ.ತಲೆ ಮರೆಸಿಕೊಂಡಿರೋ ಪ್ರಶಾಂತ್ ಹಾಗೂ ಮಾರನ್ ಪತ್ತೆಗೂ ಬಲೆ ಬೀಸಿದ್ದಾರೆ.
Kshetra Samachara
06/05/2022 01:34 pm