ಯಲಹಂಕ: ಸಮಯ ಸಾಧಕರು ಅಂದರೆ ಇವರೇ ಇರಬೇಕು ಅಂತ ಅನಿಸುತ್ತೆ. ಕುಡಿಯಲು ನೀರು ಕೊಡಿ ಎಂದು ಪರಿಚಯಿಸಿಕೊಂಡ ಏಲಿಯಾ ಎಂಬಾತ ವೃದ್ಧೆಯ ಕತ್ತಿನಲ್ಲಿದ್ದ 20 ಗ್ರಾಂ ಸರ ಕಸಿದು ಎಸ್ಕೇಪ್ ಆಗಿದ್ದ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮುಂಡೇಶ್ವರಿ ಲೇಔಟ್ ನಲ್ಲಿ ಕೃತ್ಯ ನಡೆದಿದೆ.
ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಸುಶೀಲಾ(76) ಎಂಬವರ ಬಳಿ ಕುಡಿಯಲು ನೀರು ಕೇಳಿದ್ದ. ಈ ವೇಳೆಯೇ ಮತ್ತಿಕೆರೆಯ ವಾಸಿ ಏಲಿಯಾ(27) ಸರ ಕದ್ದಿದ್ದ. ಈತ ಮನೆಗೆ ಬರುತ್ತಿರುವುದು, ಸರ ಕದ್ದು, ಓಡಿ ಹೋಗುತ್ತಿರುವ CC TV ದೃಶ್ಯಗಳ ಆಧಾರದ ಮೇರೆಗೆ ದೂರು ದಾಖಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿದ್ದ ವಿದ್ಯಾರಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಒಂದು ಲಕ್ಷಕ್ಕೂ ಹೆಚ್ಚು ಬೆಲೆಯ ಚಿನ್ನವನ್ನು ವೃದ್ಧೆಗೆ ವಾಪಸ್ ಒಪ್ಪಿಸಿದ್ದಾರೆ.
Kshetra Samachara
29/04/2022 03:29 pm