ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಇದನ್ನು ಸರಿದೂಗಿಸಲು ಸದ್ಯದಲ್ಲೇ 2 ಸಾವಿರಕ್ಕೂ ಹೆಚ್ಚು ಕಾನ್ಸ್‌ಟೇಬಲ್ ನೇಮಕಾತಿಗೆ ನೊಟಿಫಿಕೇಷನ್ ಕೊಡಲಾಗುತ್ತದೆ ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಕೋರಮಂಗಲದ ಕೆ ಎಸ್ ಆರ್ ಪಿ ಮೂರನೇ ಬೆಟಾಲಿಯನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಡಿಜಿ. ಈಗಾಗಲೇ ಎಲೆಕ್ಷನ್ ಗಾಗಿ ಕೆಲಸಗಳು ಶುರುವಾಗಿವೆ.
ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ದವಾಗಿವೆ.. ನಾವೂ ಸಿದ್ಧವಾಗಬೇಕು. ಎಲೆಕ್ಷನ್ ಗಾಗಿ ಭದ್ರತೆ ಹೆಚ್ಚು ಬೇಕಾಗುತ್ತದೆ. ನಾವೂ ಕೂಡ ಸಿದ್ದರಾಗಬೇಕು.ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈಗಾಗಲೇ 4,000 ಪೊಲೀಸ್ ಕಾನ್ಸ್‌ಟೇಬಲ್ ಪೊಲೀಸ್ ನೇಮಕಾತಿ ಮಾಡಿಕೊಳ್ಳಲಾಗಿದೆ. ಸದ್ಯದಲ್ಲೇ 2,000ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ನೇಮಕಾತಿಗೆ ನೊಟಿಫಿಕೇಷನ್ ಕೊಡಲಾಗುತ್ತದೆ ಎಂದು ಡಿಜಿ ತಿಳಿಸಿದ್ದಾರೆ.
ನಮ್ಮ ಎಲ್ಲಾ ಇಲಾಖಾ ಸಿಬ್ಬಂದಿ ಕಠಿಣ ರೀತಿಯಿಂದ ಕೆಲಸ ಮಾಡಲಾಗಿದೆ. ಪ್ರತಿಭಟನೆಗಳು, ಎಲೆಕ್ಷನ್, ಹಿಜಬ್ ವಿವಾದ ಸೇರಿದಂತೆ ಎಲ್ಲಾ ಟೈಮ್ ನಲ್ಲಿಯೂ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದೀರಾ.. ಎಲೆಕ್ಷನ್ ಗೆ ಅಂತಾ ಕೆಎಸ್‌ಆರ್‌ಪಿ ಸಿಬ್ಬಂದಿ ಬೇರೆ ಬೇರೆ ರಾಜ್ಯಗಳಿಗೂ ಹೋಗಿ ಬಂದಿದ್ದೀರ. ಎಲ್ಲರಿಗೂ ವಂದನೆಗಳು. ಇದೇ ರೀತಿ ಮುಂದಿನ ವರ್ಷ ಕೂಡ ಸಿದ್ದರಾಗಿರಬೇಕು ಎಂದರು.
Kshetra Samachara
22/04/2022 01:03 pm