ಬೊಮ್ಮನಹಳ್ಳಿ : ಅಪ್ಪ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾನೆ. ಮಗ ಡಾಕ್ಟರ್ ಆಗ್ಬೇಕು ಇಂಜಿನಿಯರ್ ಆಗಬೇಕು ಅಂತ ತಾನು ಕಷ್ಟ ಪಟ್ಟು ಮಗನನ್ನ ಸಾಕ್ತಾನೆ. ಆದ್ರೆ ಇಲ್ಲೊಬ್ಬ ಅಪ್ಪ ಅದಕ್ಕೆ ತದ್ವಿರುದ್ಧವಾಗಿದ್ದಾನೆ.
20 ವರ್ಷದ ಮಗನನು ಗಾಂಜಾ ಫೀಲ್ಡಿಗೆ ಇಳಿಸಿದ್ದ ತಂದೆ ಮಗನಿಂದ ಗಾಂಜಾ ಮಾರಾಟ ಮಾಡಿಸ್ತಿದ್ದ. ಪಿಜಿಗಳಲ್ಲಿರೋ ವಿದ್ಯಾರ್ಥಿಗಳು, ಸಾಫ್ಟ್ ವೇರ್ ಇಂಜಿನಿಯರ್ ಗಳನ್ನ ಟಾರ್ಗೆಟ್ ಮಾಡಿಕೊಂಡು ಅಪ್ಪ ಮಗ ಇಬ್ರು ಗಾಂಜಾ ಡೀಲ್ ಮಾಡ್ತಿದ್ರು. ಸದ್ಯ ಹೆಚ್ ಎಸ್ ಆರ್ ಲೇಔಟ್ ಪೋಲೀಸರು ಗಾಂಜಾ ಮಾರಾಟ ಮಾಡ್ತಾ ಇದ್ದ 20 ವರ್ಷದ ಸಾದಿಕ್ ನಿಂದ 100 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ.
ಸಾದಿಕ್ ತಂದೆ ಆವೇಜ್ ಮೂಲತಃ ತಮಿಳುನಾಡಿನವರು. ಬೆಂಗಳೂರಿಗೆ ಬಂದು HSR ಲೇ ಔಟ್, ಕೋರಮಂಗಲ, ಸರ್ಜಾಪುರ ರಸ್ತೆಯ ಪಿಜಿಗಳಲ್ಲಿ ಇರೋರಿಗೆ ಗಾಂಜಾ ಮಾರಾಟ ಮಾಡ್ತಿದ್ರು. ಇನ್ನೂ ಗಾಂಜಾ ಮಾರಾಟದ ಬಗ್ಗೆ ಯಾರಿಗೂ ಅನುಮಾನ ಬರಬಾರ್ದು ಅಂತ ಸಾದಿಕ್ ಟಿವಿಎಸ್ XL ಯೂಸ್ ಮಾಡ್ತಿದ್ದ. ಪೊಲೀಸರು ಅನುಮಾನಗೊಂಡು TVs XL ತಡೆದು ಪರಿಶೀಲನೆ ಮಾಡಿದಾಗ ಮೊದಲಿಗೆ 5 ಕೆ.ಜಿ ಗಾಂಜಾ ಪತ್ತೆಯಾಗಿತ್ತು. ನಂತರ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಮನೆಯಲ್ಲಿದ್ದ 100 ಕೆಜಿ ಗಾಂಜಾವನ್ನು ತೋರಿಸಿದ್ದಾನೆ.
ಇನ್ನೂ ತಂದೆ ಆವೇಜ್ ರೈಲಿನ ಮೂಲಕ ಹೊರ ರಾಜ್ಯಗಳಿಂದ ಗಾಂಜಾ ತರಿಸಿ ನಂತರ ಮಗನಿಗೆ ಲೋಕಲ್ ಅಡ್ರಸ್ ಕೊಟ್ಟು ಪ್ಯಾಕೆಟ್ ಮಾಡಿ ಕಳುಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಮಗ ಸಾದಿಕ್ ಬಂಧನ ಆಗ್ತಿದ್ದಂತೆ ಅವೇಜ್ ತಲೆಮರಿಸಿಕೊಂಡಿದ್ದಾನೆ. ಆವೇಜ್ ಬಂಧನಕ್ಕೂ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಲೆ ಬೀಸಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
16/04/2022 02:47 pm