ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆರ್ಯನ್‌ಖಾನ್‌ ಪರ ವಕಾಲತ್ತು ವಹಿಸಿದ್ದಾರೆ ಧಾರವಾಡದ ವಕೀಲ..!

ಧಾರವಾಡ: ಡ್ರಗ್ಸ್​ ಪಾರ್ಟಿ ಆಯೋಜನೆ ಆರೋಪದಡಿ ಎನ್​ಸಿಬಿ ಬಂಧನದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೇಸ್‌ಗೆ ಧಾರವಾಡ ಮೂಲದ ವಕೀಲರೊಬ್ಬರು ವಕಾಲತ್ತು ವಹಿಸಿದ್ದಾರೆ.

ಧಾರವಾಡ ಮೂಲದ ಖ್ಯಾತ ವಕೀಲ ಸತೀಶ್​ ಮಾನೆಶಿಂಧೆ ಅವರು ಆರ್ಯನ್ ಖಾನ್​ ಪರ ವಾದ ಮಂಡಿಸುತ್ತಿರುವ ವಕೀಲರಾಗಿದ್ದಾರೆ. ಇವರು ಬಾಲಿವುಡ್​ ತಾರೆಯರಾದ ಸಂಜಯ್​ ದತ್, ಸಲ್ಮಾನ್ ಖಾನ್ ಮತ್ತು ರಿಯಾ ಚಕ್ರವರ್ತಿಗೆ ಜಾಮೀನು ಕೊಡಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.

ಮಾನೆಶಿಂಧೆ ಅವರ ಕುಟುಂಬ ಧಾರವಾಡದಲ್ಲೇ ನೆಲೆಸಿದೆ. ಇವರು ಗದಗ, ರೋಣ, ವಿಜಯಪುರ, ಧಾರವಾಡದ ಸರ್ಕಾರಿ ಶಾಲೆ,‌ ಕಾಲೇಜುಗಳಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ.

ಶಾರುಖ್‌ ಪುತ್ರನ ಕೇಸ್ ನಡೆಸುತ್ತಿರುವ ಮಾನೆಶಿಂಧೆ ಕುರಿತು ಅವರ ಸ್ನೇಹಿತ ಮುರುಳಿಧರ ಕಡಕೋಳ ಅವರು ಸಂತಸ ಹಂಚಿಕೊಂಡಿದ್ದಾರೆ.

ಗದಗ ಮತ್ತು ರೋಣ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರ ಸೈನಿಕ ಶಾಲೆಯಲ್ಲಿ ಪಿಯುಸಿ, ಧಾರವಾಡದ ಕೆಸಿಡಿಯಲ್ಲಿ ಬಿಕಾಂ ಪದವಿ ಪಡೆದುಕೊಂಡಿದ್ದಾರೆ. ಸಿದ್ದಪ್ಪ ಕಂಬಳಿ ಕಾಲೇಜ್‌ನಲ್ಲಿ ಕಾನೂನು ಪದವಿ ಮುಗಿಸಿದ್ದಾರೆ. ಕಾನೂನು ಪದವಿ ಬಳಿಕ ಖ್ಯಾತ ವಕೀಲ ಹಾಗೂ ರಾಜಕಾರಣಿ ರಾಮ್ ಜೇಠ್ಮಲಾನಿ ಬಳಿ 10 ವರ್ಷ ಅಭ್ಯಾಸ ಮಾಡಿದ್ದಾರೆ. ಈಗ ದೊಡ್ಡ ವಕೀಲರಾಗಿ ಬೆಳೆದಿರುವ ಮಾನೆಶಿಂಧೆ ಅವರು ಧಾರವಾಡದವರು ಎಂಬುದು ಹೆಮ್ಮೆ.

Edited By : Manjunath H D
Kshetra Samachara

Kshetra Samachara

06/10/2021 03:11 pm

Cinque Terre

4.29 K

Cinque Terre

1

ಸಂಬಂಧಿತ ಸುದ್ದಿ