ಆನೇಕಲ್: ಭೂಸ್ವಾಧೀನ ಮಾಡುವುದನ್ನು ಕೈಬಿಡುವಂತೆ ಒತ್ತಾಯಿಸಿ ರೈತರೊಬ್ಬರು ಮರದ ಬೇರುಗಳಿಂದ ನೇಣು ಹಾಕಿಕೊಳ್ಳಲು ಮುಂದಾದ ಘಟನೆ ಇಗ್ಗಲೂರು ಗ್ರಾಮ ಬಳಿ ನಡೆದಿದೆ.
ಬಡವರ ಜಮೀನುಗಳನ್ನು ಭೂಸ್ವಾಧೀನ ಮಾಡುವುದನ್ನು ಕೈಬಿಡಬೇಕು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಘಟನೆ ಆನೇಕಲ್ ತಾಲ್ಲೂಕಿನ ಇಗ್ಗಲೂರು ಗ್ರಾಮ ಬಳಿ ನಡೆದಿದೆ.
ಇಗ್ಗಲೂರು ಗ್ರಾಮದ ಸರ್ವೇ ನಂ 83/4 ರಲ್ಲಿ 4 ನಾಲ್ಕು ಏಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯವರು ಇಂದು ಜೆಸಿಬಿ ಮೂಲಕ ಭೂಸ್ವಾಧೀನ ಮಾಡುವುದಕ್ಕೆ ಮುಂದಾದಾಗ ರೈತರು ಅಡ್ಡಿ ಪಡಿಸಿದರು, ಕೆಲ-ಕಾಲ ಅಧಿಕಾರಿಗಳ ಮತ್ತು ರೈತರ ನಡುವೆ ಮಾತಿನ ಚಕಮುಖಿ ನಡೆಯಿತು. ಬಡವರ ರಕ್ತವನ್ನು ಹೀರುವಂತಹ ಕೆಲಸವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯವರು ಮಾಡುತ್ತಿದ್ದಾರೆ ಎಂದು ರೋಷಗೊಂಡ ಕೆಲ ರೈತರು ಮರದ ಬೇರುಗಳಿಗೆ ನೇಣು ಹಾಕಿಕೊಳ್ಳಲು ಮುಂದಾದಾಗ ಪೋಲಿಸರು ಅದನ್ನು ತಡೆದರು. ಕೊನೆಗೆ ಪೋಲಿಸರು ರೈತರನ್ನು ಬಂದಿಸಲಾಯಿತು.
ಇನ್ನು ಸ್ಥಳದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವಿಜಯ್ ಕುಮಾರ್, ಡಿವೈಎಸ್ಪಿ ಮಲ್ಲೇಶ್ ಗೌಡ, ರೈತರಾದ ಶಿವರಾಮರೆಡ್ಡಿ, ಇಗ್ಗಲೂರು ಬಾಲರಾಜ್, ಮುನಿರಾಜು ಸೇರಿದಂತೆ ರೈತರು ಮತ್ತು ಸುಮಾರು 100ಕ್ಕೂ ಪೋಲಿಸರು ಭಾಗವಹಿಸಿದ್ದರು.
-ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
Kshetra Samachara
26/06/2022 10:38 am