ಬೆಂಗಳೂರು: ಮಾನವ ಕಳ್ಳಸಾಗಾಣೆ ತಡೆಗೆ ದೇವನಹಳ್ಳಿ ಸಂಚಾರಿ ಪೊಲೀಸರು ಪಟ್ಟಣದ ಪ್ರಮುಖ ಸರ್ಕಲ್‌ಗಳಲ್ಲಿ ಭಿತ್ತಿಪತ್ರ ಹಿಡಿದು ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಪಟ್ಟಣದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ಮತ್ತು ರಾಣಿ ಕ್ರಾಸ್‌ಗಳಲ್ಲಿ ಬಿತ್ತಿಪತ್ರ ಪ್ರದರ್ಶನ ನಡೆಸಿದರು.
ಮಾನವ ಕಳ್ಳಸಾಗಾಣೆ ತಡೆಗೆ ಭಿಕ್ಷಾಟನೆ ನಿಲ್ಲಬೇಕು. ಈ ಜಾಗೃತಿಗೆ ಪೊಲೀಸರ ಜೊತೆ ಜನತೆ ಕೈ ಜೋಡಿಸಬೇಕಿದೆ. ಕಿರಿಯ ಮಕ್ಕಳ ಮಾರಾಟ, ಮಹಿಳೆಯರ ಕಳ್ಳಸಾಗಾಣೆಗೆ ಬಿಕ್ಷಾಟನೆ ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಭಿಕ್ಷಾಟನೆ ತಡೆಗೆ ಹಣ ನೀಡದಿರುವುದೇ ಸೂಕ್ತ ಎಂದು ಪೊಲೀಸರು ಜನಜಾಗೃತಿಗೆ ಮುಂದಾಗಿದ್ದಾರೆ.
Kshetra Samachara
08/06/2022 08:29 pm