ಬೆಂಗಳೂರು:ಕೆಂಗೇರಿ ಬಳಿಯ ರಾಮಸಂದ್ರ ಗ್ರಾಮದ ನಿವಾಸಿಯೊಬ್ಬರ ಜಮೀನನ್ನ ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು.ಇದಕ್ಕೆ ಬದಲಾಗಿ ಬದಲಿ ನಿವೇಶ ಪಡೆಯಲು ದೂರುದಾರರು ಅರ್ಜಿ ಹಾಕಿದ್ರು.
ಅರ್ಜಿಯನ್ವಯ ಬಿಡಿಎ ಅಧಿಕಾರಿಗಳು ಸರ್ವೆ ನಡೆಸಿ ನಕ್ಷೆ ನೀಡಲು ಒಂದು ಕೋಟಿಗೆ ಡಿಮ್ಯಾಂಡ್ ಮಾಡಿ ಅರವತ್ತು ಲಕ್ಷ ಅಡ್ವಾನ್ಸ್ ನೀಡುವಂತೆ ದುಂಬಾಲು ಬಿದ್ದಿದ್ದ ಬಿಡಿಎ ಪಶ್ಚಿಮ ವಿಭಾಗ ಸಹಾಯ ಇಂಜಿನಿಯರ್ ಬಿಟಿ ರಾಜು, ಲಂಚಕ್ಕೆ ಬೇಡಿಕೆ ಇಟ್ಟಿರೋ ಬಗ್ಗೆ ಎಸಿಬಿಯಲ್ಲಿ ದೂರು ದಾಖಲಿಸಿದ್ದ ದೂರುದಾರರ ದೂರಿನ ಮೇರೆಗೆ ಇಂದು ಎಸಿಬಿಯಿಂದ ಟ್ರ್ಯಾಪ್ ಮಾಡಲಾಗಿದೆ.
5 ಲಕ್ಷ ಹಣ ಪಡೆಯವಾಗ ಟ್ರ್ಯಾಪ್ ಮಾಡಿದ್ದ ಸಹಾಯಕ ಇಂಜಿನಿಯರ್ ಎಸಿಬೆ ಬಲೆಗೆ ಬಿದ್ದಿದ್ದಾನೆ.33 ಗುಂಟೆ ಜಮಿನಿಗೆ ಬದಲಿ ನಿವೇಶನಪಡೆಯಲು ದೂರುದಾರು ಅರ್ಜಿಹಾಕಿದ್ರು. ಕೋಟಿ ಕೋಟಿ ಬೆಲೆಯ ಜಾಗಕ್ಕೆ ದಾಖಲಾತಿ ಮಾಡಿಕೊಡಲು ಭ್ರಷ್ಟ ಅಧಿಕಾರಿ ರಾಜು ಒಂದು ಕೋಟಿ ಡಿಮ್ಯಾಂಡ್ ಮಾಡಿದ್ದು ಇದ್ರಲ್ಲಿ ಯಾರ ಯಾರ ಪಾಲಿತ್ತು ಎನ್ನುವದನ್ನ ಎಸಿಬಿ ತನಿಖೆಯಲ್ಲಿ ಬಯಲುಮಾಡಬೇಕಿದೆ.
Kshetra Samachara
07/06/2022 09:40 pm