ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಜನಾಗೆ ಅಶ್ಲೀಲ ಮೆಸೇಜ್; ಆ್ಯಡಂ ಬಿದ್ದಪ್ಪ ಅರೆಸ್ಟ್

ಬೆಂಗಳೂರು: ನಟಿ ಸಂಜಾನ ಗಲ್ರಾನಿಗೆ ಅಶ್ಲೀಲ ಮೆಸೇಜ್ ಕಳಿಸಿದ ಆರೋಪದ ಮೇಲೆ ಆ್ಯಡಮ್ ಬಿದ್ದಪ್ಪ ನನ್ನು ಇಂದಿರಾ ನಗರ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ವಾಟ್ಸ್ ಆ್ಯಪ್ ನಲ್ಲಿ ಅಸಭ್ಯ ಮತ್ತು ಅಶ್ಲೀಲ ಮೆಸೇಜ್ ಮಾಡಿದ್ದ ಎಂದು ನಟಿ ಸಂಜನಾ ಇಂದಿರಾ ನಗರ ಠಾಣೆಗೆ ದೂರು ನೀಡಿದ್ರು. ಈ ಹಿನ್ನೆಲೆ ತಡ ರಾತ್ರಿ ಫಾರ್ಮ್ ಹೌಸ್ ನಲ್ಲಿದ್ದ ಆಡಮ್ ಬಿದ್ದಪ್ಪನ ಕರೆತಂದು ವಿಚಾರಣೆ ನಡೆಸಲಾಗ್ತಿದೆ ಎಂದು ಪೊಲೀಸ್ರು ಮಾಹಿತಿ ನೀಡಿದ್ದಾರೆ.

ಆಡಮ್ ಬಿದ್ದಪ್ಪ ಖ್ಯಾತ ಫ್ಯಾಷನ್ ಡಿಸೈನರ್, ಕೋರಿಯೋಗ್ರಾಫರ್ ಆಗಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರ. ನಟಿ ಸಂಜನಾ ಗಲ್ರಾನಿ ಹಾಗೂ ಆಡಮ್ ಸಾಕಷ್ಟು ದಿನಗಳಿಂದ ಸ್ನೇಹಿತರಾಗಿದ್ರು. ಆದ್ರೆ ಕಳೆದ ಕೆಲ ದಿನಗಳ ಹಿಂದೆ ಸಂಜನಾಗೆ ಅಶ್ಲೀಲ ಮೆಸೇಜ್ ಗಳನ್ನು ಆಡಮ್ ಕಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದೇ ಫೆಬ್ರವರಿ 25ರಂದು ರಾತ್ರಿ 10 ರಿಂದ 12ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆಡಮ್ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂದು ನಟಿ ಆರೋಪಿಸಿದ್ದು ಈ ಬಗ್ಗೆ ಹೆಚ್ಚು ಮಾತನಾಡೋದಿಲ್ಲ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

04/03/2022 11:27 am

Cinque Terre

16.65 K

Cinque Terre

0

ಸಂಬಂಧಿತ ಸುದ್ದಿ