ಬೆಂಗಳೂರು: ರಿಯಾಲಿಟಿ ಶೋ ನಲ್ಲಿ ಮಿಂಚಿದ್ದ ಸುನಾಮಿ ಕಿಟ್ಟಿ ಮತ್ತೆ ಸುದ್ದಿಯಾಗಿದ್ದಾರೆ. ಸದಾ ಪಬ್, ಬಾರ್ ನಲ್ಲೇ ಕಿರಿಕ್ ಮಾಡಿಕೊಳ್ಳೋ ಕಿಟ್ಟಿ ಇದೀಗ ಮತ್ತೆ ಪಬ್ ನಲ್ಲಿ ಗಲಾಟೆ ಮಾಡಿಕೊಂಡಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 24 ರಂದು ರಾತ್ರಿ ಮಿರಾಜ್ ಪಬ್ ನಲ್ಲಿ ಗಲಾಟೆಯಾದ ಸಂಬಂಧ ಕಿಟ್ಟಿ ಮತ್ತು ಆತನ ಸ್ನೇಹಿತ ಚೇತನ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ. ಚೇತನ್, ಕಿಟ್ಟಿ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡಲು ಹೋಗಿದ್ದಾಗ ಶ್ಯಾಂಪೇನ್ ನನ್ನು ತೆಗೆದುಕೊಂಡು ಜೋರಾಗಿ ಓಪನ್ ಮಾಡಿದ್ದು ಇದ್ರಿಂದ ಪಕ್ಕದಲ್ಲಿದ್ದ ಪ್ರಶಾಂತ್ ಎಂಬುವವರ ಮೇಲೆ ಬಿದ್ದಿದೆ. ನಂತರ ಪ್ರಶಾಂತ್ ಪ್ರಶ್ನೆ ಮಾಡಿದ್ದಕ್ಕೆ ಕಿಟ್ಟಿ ಮತ್ತು ಆತನ ಗ್ಯಾಂಗ್ ಪ್ರಶಾಂತ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಎರಡು ಗುಂಪಿನವರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ಕುರಿತು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.
ಇನ್ನೂ ಕಿಟ್ಟಿ ಈ ರೀತಿಯಾಗಿ ಸಾಕಷ್ಟು ಬಾರಿ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಒಂದು ಎಫ್ ಐಆರ್ ನಲ್ಲಿ A1 ಆರೋಪಿ ಚೇತನ್ ಗೌಡ, A2 ಆರೋಪಿಯಾಗಿ ಸುನಾಮಿ ಕಿಟ್ಟಿಯಾಗಿದ್ರೆ. ಪ್ರತಿ ದೂರಿನಲ್ಲಿ ಚೇತನ್, ಪ್ರಶಾಂತ್ ಗುಂಪಿನ ಮೇಲೂ ದೂರು ದಾಖಲಿಸಿದ್ದಾರೆ. ಎರಡೂ ಪ್ರಕರಣಗಳನ್ನ ತನಿಖೆ ಮಾಡ್ತಿರೋದಾಗಿ ಕೇಂದ್ರ ವಿಭಾಗದ ಡಿಸಿಪಿ ತಿಳಿಸಿದ್ದಾರೆ.
PublicNext
08/08/2022 05:14 pm