ಬೆಂಗಳೂರು: ಸಿಲಿಕಾನ್ ಸಿಟಿಯ ಜನರೇ ಹುಷಾರಾಗಿರಿ. ಇಷ್ಟು ದಿನ ಬ್ಯಾಂಕ್ಗಳ ಹೆಸರು ಹೇಳಿ ವಂಚನೆ ಮಾಡುತ್ತಿದ್ದ ಖದೀಮರು ಈಗ ಸರಕಾರದ ಇಲಾಖೆಯಾದ ಬೆಸ್ಕಾಂ ಹೆಸರು ಹೇಳಿ ನಿಮ್ಮ ಅಕೌಂಟ್ ನಲ್ಲಿ ಇರುವ ಹಣವನ್ನು ಲಪಟಾಯಿಸಿ ಬಿಡುತ್ತಾರೆ.
ಹೌದು ಖದೀಮರ ಗ್ಯಾಂಗ್ ಒಂದು ಸಂಪೂರ್ಣ ಸಿಟಿಗೆ ವಿದ್ಯುತ್ ಸರಬರಾಜು ಮಾಡುವ ಬೆಸ್ಕಾಂ ಹೆಸರು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾರೆ. ಈ ಗ್ಯಾಂಗ್ ನಿಮ್ಮ ಮೊಬೈಲ್ ನಂಬರ್ ಗೆ ನೀವು ಹೋದ ತಿಂಗಳ ಕರೆಂಟ್ ಬಿಲ್ ಕಟ್ಟಿಲ್ಲ. ನಿಮ್ಮ ಮನೆಯ ಕರೆಂಟ್ ಕಟ್ ಮಾಡುತ್ತೇವೆ ಎಂದು ನಿಮಗೆ ಹೆದರಿಸಿ ಕೂಡಲೇ ಕೆಳಗೆ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಎಂದು ಮೆಸೇಜ್ ಕಳಿಸುತ್ತಾರೆ.
ಮೆಸೇಜ್ ನಲ್ಲಿ ಕೊಟ್ಟಿರುವಂತಹ ಬೆಸ್ಕಾಂ ಹೆಲ್ಪ್ ಲೈನ್ ಸಹಾಯವಾಣಿ ನಂಬರ್ ಗೆ ನೀವು ಕರೆ ಮಾಡಿದರೆ ನಿಮಗೆ ಒಂದು ಓಟಿಪಿ ಕಳುಹಿಸಿ ನಿಮ್ಮ ಅಕೌಂಟ್ ನಲ್ಲಿ ಇದ್ದ ಹಣವನ್ನು ಲಪಟಾಯಿಸಿ ಬಿಡುತ್ತಾರೆ. ಈ ರೀತಿ ಹಲವಾರು ಬೆಸ್ಕಾಂ ಗ್ರಾಹಕರಿಗೆ ಮೆಸೇಜ್ ಕಳಿಸಿ ಹಲವಾರು ಜನರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬಗ್ಗೆ ಬೆಸ್ಕಾಂ M.D. ಆದ ಮಾಲ್ತೇಶ್ ಬೆಳಗಿ, ಜನರು ಈ ರೀತಿಯ ಮೆಸೇಜ್ ಗಳಿಗೆ ಉತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
21/09/2022 06:23 pm