ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದ 51 ಪೊಲೀಸ್ ಠಾಣೆಗೆ ಬೇಕಾಗಿದ್ದ ಸರಗಳ್ಳ ಕೊನೆಗೂ ಸೆರೆ

ರಾಜ್ಯದ 51 ಠಾಣೆಗಳಿಗೆ ಬೇಕಾಗಿದ್ದ ಸರಗಳ್ಳನನ್ನು ಪುಟ್ಟೇನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸಂತೋಷ್ ಖತರ್ನಾಕ್ ಸರಗಳ್ಳನಾಗಿದ್ದು, ಈತನಿಗೆ ಸಾಥ್‌ ನೀಡಿರುವ ರವಿ ಎಂಬಾತನನ್ನು ಕೂಡ ಬಂಧಿಸಲಾಗಿದೆ.

ಬಂಧಿತನಿಂದ 1 ಕೆ.ಜಿ. ಚಿನ್ನಾಭರಣ ಸೀಜ್ ಮಾಡಿದ್ದು, ಈತ ಇಡೀ ಬೆಂಗಳೂರು ನಗರ ಸುತ್ತಿ ಸರಗಳ್ಳತನ ಮಾಡುತ್ತಿದ್ದ. ಬೆಳಗ್ಗೆ 5ಕ್ಕೆ ಮನೆ ಬಿಟ್ಟರೆ ಸರಗಳ್ಳತನ ಮಾಡುವವರೆಗೂ ಬೈಕ್ ನಲ್ಲಿ ಸುತ್ತಾಡ್ತಿದ್ದ. ಬೈಕ್ ಗೆ ನಕಲಿ ನಂಬರ್ ಪ್ಲೇಟ್ ಬಳಸಿ ಆರ್ ಟಿಒ ವೆಬ್ ಸೈಟ್ ಗೆ ಹೋಗಿ ಬೈಕ್ ನಂಬರ್ ಸರ್ಚ್ ಮಾಡುತ್ತಿದ್ದ!

ತನ್ನ ಪಲ್ಸರ್ ಬೈಕ್ ಕಲರ್ ಗೆ ಯಾವ ಯಾವ ನಂಬರ್ ಇದೆ ಎಂದು ಸರ್ಚ್ ಮಾಡಿ ಬಳಿಕ ಅದೇ ಕಲರ್ ಬೈಕ್ ನ ಬೇರೆ ಬೇರೆ ಬೈಕ್ ಗಳ ನಕಲಿ ನಂಬರ್ ಕಲೆಕ್ಟ್ ಮಾಡುತ್ತಿದ್ದ. ಆ ನಕಲಿ ನಂಬರ್ ಪ್ಲೇಟ್ ಬಳಸಿಕೊಂಡು ಚೈನ್ ಸ್ನ್ಯಾಚ್ ಗೆ ಫೀಲ್ಡ್ ಗಿಳಿಯುತ್ತಿದ್ದ. ಮನೆ ಬಿಡುವಾಗ ಹೆಲ್ಮೆಟ್ ಹಾಕಿದ್ರೆ ಎಲ್ಲಿಯೂ ಹೆಲ್ಮೆಟ್ ತೆಗೆಯದೇ ಬೈಕ್ ನಲ್ಲಿ ಓಡಾಟ ನಡೆಸ್ತಿದ್ದ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಖದೀಮ, ಬೈಕ್ ನಲ್ಲಿ ಸುತ್ತಾಡುವಾಗ ಊಟಕ್ಕೆ ಹೋದರೂ ಹೆಲ್ಮೆಟ್ ತೆಗೆಯುತ್ತಿರಲಿಲ್ಲ.

ಕಳೆದ 2 ತಿಂಗಳಿಂದ ಪುಟ್ಟೇನಹಳ್ಳಿ ಪೊಲೀಸ್ರು ಚೈನ್ ಸ್ನ್ಯಾಚರ್ ನ ಹಿಂದೆ ಬಿದ್ದಿದ್ರು. ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 2 ಕಡೆ ಸರಗಳ್ಳತನ ಮಾಡಿದ್ದ ಕಳ್ಳನ ಹಿಡಿಯಲು ಪೊಲೀಸ್ರು 300 ಕಿ.ಮೀ. ಸಿಸಿ ಟಿವಿ ಪರಿಶೀಲನೆ ನಡೆಸಿದ್ರು. ಜೆ.ಪಿ.ನಗರ, ಪುಟ್ಟೇನಹಳ್ಳಿ, ಹೊಸಕೋಟೆ, ಜಯನಗರ, ಬನ್ನೇರುಘಟ್ಟ, ಯಲಹಂಕ, ಕೊಡಗೇಹಳ್ಳಿ, ಅಮೃತಹಳ್ಳಿಯಲ್ಲಿ ಚೈನ್ ಸ್ನ್ಯಾಚ್ ಮಾಡಿದ್ದ.

ಸಂತೋಷ್ ನ ಹಿಡಿಯಲು ಬೆಂಗಳೂರು ನಗರ, ಗ್ರಾಮಾಂತರ ಪೊಲೀಸರು ತಲೆ ಕೆಡಿಸಿಕೊಂಡಿದ್ದರು.

ಆದರೆ, 4 ವರ್ಷದಿಂದ ಯಾರ ಕೈಗೂ ಸಿಕ್ಕಿರಲಿಲ್ಲ! ಪುಟ್ಟೇನಹಳ್ಳಿ ಪೊಲೀಸರು ಕಳ್ಳನ ಚಲನವಲನ ಬಗ್ಗೆ ಹದ್ದಿನ ಕಣ್ಣಿಟ್ಟು, ರಾತ್ರಿ- ಹಗಲು ರೋಡ್‌ ನಲ್ಲಿ ಕಾಯುತ್ತಿದ್ದ ಪುಟ್ಟೇನಹಳ್ಳಿ ಇನ್ಸ್ ಪೆಕ್ಟರ್ ಮುನಿರೆಡ್ಡಿ, ಪಿಎಸ್ ಐ ಪ್ರಸನ್ನ ಕುಮಾರ್, ರಮೇಶ್ ಹೂಗಾರ್, ಮನು ಹಾಗೂ ಸಿಬ್ಬಂದಿ ಹರಸಾಹಸ ಪಟ್ಟು ಕೊನೆಗೂ ಖದೀಮನನ್ನು ಪತ್ತೆ ಮಾಡಿದ್ದಾರೆ.

ಸಿಸಿ ಟಿವಿ ಕೊಟ್ಟ ಸುಳಿವಿನ ಮೇಲೆ ಸಂತೋಷ್ ನ ಜಾಡು ಬೆನ್ನತ್ತಿ ಕೊನೆಗೂ ಯಶಸ್ವಿಯಾಗಿದ್ದಾರೆ. ಸಿಸಿ ಟಿವಿಯಲ್ಲಿ ಕಳ್ಳನ ದೇಹದ ಮಾದರಿ, ಹೆಲ್ಮೆಟ್, ಬ್ಲೂ ಕಲರ್ ಶರ್ಟ್ ಆಧಾರದ ಮೇಲೆ ಚೋರನನ್ನು ಬಂಧಿಸಿದ್ದಾರೆ. ಬಿಕಾಂ ಓದಿದ್ದ ಸಂತೋಷ್, ಇಂಟೀರಿಯರ್ ಕೆಲಸ ಮಾಡುತ್ತಿದ್ದ. ಈ ಕೆಲಸದಿಂದ ಬರುವ ಹಣ ಸಾಕಾಗದೆ ಅಸಂತೋಷಗೊಂಡಿದ್ದ. ಹೀಗಾಗಿ ಕಳೆದ 4 ವರ್ಷದಿಂದ ಸರಗಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ.

Edited By :
PublicNext

PublicNext

26/08/2022 03:48 pm

Cinque Terre

43.49 K

Cinque Terre

2

ಸಂಬಂಧಿತ ಸುದ್ದಿ