ಲಂಚ ಪ್ರಕರಣದಲ್ಲಿ ಮೇಲಿಂದ ಮೇಲೆ ಹಿರಿಯ ಅಧಿಕಾರಿಗಳು ಜೈಲುಪಾಲಾಗುತ್ತಿರುವ ಬೆನ್ನಲ್ಲೇ ಇವತ್ತು ಇನ್ನೊಬ್ಬ ಮಹಿಳಾ ಪೊಲೀಸ್ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಜಮೀನು ವಿಚಾರ ಇತ್ಯರ್ಥಕ್ಕೆ ಮಾಜಿ ಕಾರ್ಪರೇಟರ್ ಸಹೋದರನಿಂದ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್‌ಪೋರ್ಸ್ (BMTF) ಸಬ್ ಇನ್ ಸ್ಪೆಕ್ಟರ್ "ಬೇಬಿ ಒಲೈಕಾರ್" ಎಸಿಬಿ ಬಲೆಗೆ ಬಿದ್ದಿದ್ದಾರೆ. ದೂರುದಾರ ಗಿರೀಶ್ ಎಂಬುವರನ್ನು ಜಮೀನು ಸೆಟಲ್ ಮೆಂಟ್ ಗೆ ಕರೆಸಿ ಮೂರು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಬೇಬಿ ಒಲೈಕಾರ್ 1 ಲಕ್ಷ ಲಂಚ ಪಡೆಯುವಾಗ ಲಾಕ್ ಆಗಿದ್ದಾರೆ.
ಸದ್ಯ ಮಹಿಳಾ ಪಿಎಸ್ಐ "ಬೇಬಿ ಒಲೈಕಾರ್" ಯವರನ್ನು ಎಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ದೂರುದಾರ ಸಹೋದರ ಲಕ್ಷ್ಮೀನಾರಾಯಣ್ ಅವರು ಭ್ರಷ್ಟ ಅಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಲು ಸೂತ್ರದಾರರಾಗಿದ್ದು ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ಜೊತೆ ಮಾತನಾಡಿ ಪ್ರಕರಣದ ವಿವರ ನೀಡಿದ್ದು ಹೀಗೆ.
PublicNext
07/07/2022 07:59 pm