ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಿರಿಯ ನಟಿ, ಗುಬ್ಬಿ ವೀರಣ್ಣನವರ ಮಗಳು ಜಿ.ವಿ.ಹೇಮಲತಾ ನಿಧನ

ದೊಡ್ಡಬಳ್ಳಾಪುರ: ಕಲಾಬ್ರಹ್ಮ ಗುಬ್ಬಿ ವೀರಣ್ಣ ಅವರ ಪುತ್ರಿ ಜಿ.ವಿ.ಹೇಮಲತಾ (75) ನಗರದ ಸೋಮೇಶ್ವರ ಬಡಾವಣೆಯಲ್ಲಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತದೇಹವನ್ನ ಆಸ್ಪತ್ರೆಗೆ ದಾನ ಮಾಡಲು ಕುಟುಂಬಸ್ಥರು ನಿರ್ಧಾರಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಜಿ.ವಿ.ಹೇಮಲತಾರವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬಾಶೆಟ್ಟಿಹಳ್ಳಿ‌ ಸಮೀಪದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿರುವುದ್ದಾಗಿ ಕುಟುಂಬ ಮೂಲಗಳು ತಿಳಿಸಿವೆ.

ಮೃತ ಹೇಮಲತಾ ಅವರು ಕಳೆದ ಐದು ವರ್ಷಗಳಿಂದ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದರು, ಗುಬ್ಬಿ ವೀರಣ್ಣನವರ ಮಗ ಗುರುಸ್ವಾಮಿರವರ ಪುತ್ರಿ ಟಿಎಪಿಎಂಸಿಎಸ್ ಮಾಜಿ ನಿರ್ದೇಶಕಿ ಜಯಭಾರತಿ ಮನೆಯಲ್ಲಿದ್ದರು. ಹೇಮಲತಾ ಅವರು ನಾಲ್ಕೈದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಜಕುಮಾರ್ ಜತೆಗೆ ಎಮ್ಮೆತಮ್ಮಣ್ಣ ಚಿತ್ರದಲ್ಲಿ‌ ಹೇಮಲತಾ ನಟಿಸಿದ್ದಾರೆ. ಕಲ್ಯಾಣ್ ಕುಮಾರ್ ಅವರೊಂದಿಗೆ ಕಲಾವತಿ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಉದಯಕುಮಾರ್ ಜತೆಗೂ ನಟಿಸಿದ್ದಾರೆ. ಅವರ ನಟನೆಗೆ ಹಲವು ಪುರಸ್ಕಾರಗಳು ಸಂದಿವೆ.

ಮೃತರಿಗೆ ಇಬ್ಬರು ಪುತ್ರರು, ಪುತ್ರಿ, ನಾಲ್ವರು ಮೊಮ್ಮಕ್ಕಳಿದ್ದಾರೆ. ಶ್ಯಾಮ್ ಲೇಖರಾಜ್ ಚಾಟ್ಲಾನಿ, ಜಯಿಶ್ ಲೇಖರಾಜ್ ಚಾಟ್ಲಾನಿ ಹಾಗೂ ಶಿಲ್ಪಾ ಲೇಖರಾಜ್ ಚಾಟ್ಲಾನಿ ಅವರು ಹೇಮಲತಾ ಅವರ ಮಕ್ಕಳು. ಈ ಮೂವರು ಮಕ್ಕಳು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೆ ಹೇಮಲತಾ ಅವರು ಅಮೆರಿಕಾಗೆ ಹೋಗಿ ಬಂದಿದ್ದರು.

ಮೃತ ದೇಹವನ್ನು ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ‌ ಮೆಡಿಕಲ್ ಆಸ್ಪತ್ರೆಗೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ ಎಂದು ಮೂಲಗಳು‌ ತಿಳಿಸಿವೆ. ನಿರ್ದೇಶಕ ಪ್ರೀತಂ ಗುಬ್ಬಿ ಸೇರಿದಂತೆ ಹಲವು ರಂಗಭೂಮಿಯ ಗಣ್ಯರು ಸೋಮೇಶ್ವರ ಬಡಾವಣೆಯಲ್ಲಿ ಮೃತರ ಅಂತಿಮ ದರ್ಶನ ಪಡೆದರು. ಹಿರಿಯ ರಂಗ ಕಲಾವಿದೆ ಬಿ.ಜಯಶ್ರೀ ಹಾಗೂ ಹಲವು ಗಣ್ಯರು ಸಪ್ತಗಿರಿ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆಯಲಿದ್ದಾರೆ.

Edited By :
PublicNext

PublicNext

03/07/2022 10:12 am

Cinque Terre

57 K

Cinque Terre

0

ಸಂಬಂಧಿತ ಸುದ್ದಿ