ಬೆಂಗಳೂರು: ಜೇಮ್ಸ್ ಚಿತ್ರ ಎಲ್ಲಾ ಥಿಯೇಟರ್ ಗಳಲ್ಲೂ ಧೂಳೆಬ್ಬಿಸಿ ಭಾರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಟ್ರಿಪಲ್ ಆರ್ ಹಾಗೂ ದಿ ಕಾಶ್ಮೀರ್ ಫೈಲ್ಸ್ ಚಿತ್ರಗಳಿಗೆ ಜಾಗ ಮಾಡಿಕೊಡಲು ಜೇಮ್ಸ್ ವಿರುದ್ಧ ಹುನ್ನಾರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು.
ಹೀಗಾಗಿ ಇಂದು ಶಿವಣ್ಣ,ಸಾರಾ ಗೋವಿಂದ್ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಶಿವಣ್ಣ, ನಾಡು, ನುಡಿ, ಚಿತ್ರರಂಗದ ವಿಚಾರ ಬಂದಾಗ ನಾವೆಲ್ಲಾ ಧ್ವನಿ ಎತ್ತುತ್ತೇವೆ. ಜೇಮ್ಸ್ ಚಿತ್ರಕ್ಕೆ ಥಿಯೇಟರ್ ಗಳ ಸಮಸ್ಯೆ ಆಗ್ತಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಶಿವಣ್ಣಗೆ ಮೂರು ಬಾರಿ ಕಾಲ್ ಮಾಡಿ ಸಮಸ್ಯೆ ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ ಖುದ್ದು ಶಿವಣ್ಣ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.
PublicNext
24/03/2022 03:30 pm